ಮೈಸೂರು: ಎಚ್‌ಎನ್‌ಎಸ್ ಸರ್ವೆ ಸಂದರ್ಭದಲ್ಲಿ ಹಗೊಳಗಾದ ಆಶಾ ಕಾರ್ಯಕರ್ತೆಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿ ಹಾಗೂ ತಂಡದಲ್ಲಿ ಸರ್ವೇ ನಡೆಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿ, ಆಶಾಗಳಿಗೆ ಸೂಕ್ತ ಭದ್ರತೆ ರPಣೆ ನೀಡಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿ ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ನಡೆಸಿರುವುದನ್ನು ಜಿ ಸಮಿತಿಯ ಸಂಧ್ಯಾ ಪಿ.ಎಸ್. ತೀವ್ರವಾಗಿ ಖಂಡಿಸಿದರು. ಜಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಚ್.ಪ್ರಸಾದ್ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಡೆದ ಘಟನೆ ನೋವು ತರುವಂತದ್ದು, ಮುಂದೆ ಈ ರೀತಿ ಘಟನೆ ಮರುಕಳಿಸಿದಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಪರಾಧಿಗೆ ಕಾನೂನು ರೀತಿಯ ಶಿಕ್ಷೆ ದೊರೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಚ್‌ಎನ್‌ಎಸ್ ಸರ್ವೆ ಮಾಡುವಾಗ ತಂಡದ ಹೊರತಾಗಿ ಯಾರು ಮಾಡಬೇಕಾಗಿಲ್ಲ. ಇದರ ಬಗ್ಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದರು.
ಮೈಸೂರು ನಗರ ಆಶಾ ಕಾರ್ಯಕರ್ತೆಯರ ಸಂಘದ ಜಿ ಅಧ್ಯಕ್ಷೆ ಸೀಮಾ, ಮುಖಂಡರಾದ ಭಾಗ್ಯ, ಮಣಿಲಾ, ಕೋಮಲ, ಸುನೀತಾ, ಹೇಮಾ ಸೇರಿದಂತೆ ೫೦೦ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.