Friday, April 11, 2025
Google search engine

Homeಆರೋಗ್ಯಕಿವಿ ನೋವಿಗೆ ಮನೆ ಮದ್ದು ಉಪಯೋಗಿಸಿ

ಕಿವಿ ನೋವಿಗೆ ಮನೆ ಮದ್ದು ಉಪಯೋಗಿಸಿ

ಚಳಿಯಿಂದಾಗಿ ತಲೆನೋವು, ವೈರಲ್ ಫೀವರ್, ಶೀತ ನೆಗಡಿ ಕೆಮ್ಮು ಸಾಮಾನ್ಯವಾದ ಕಾಯಿಲೆ ಗಳಂತೆ ಕಂಡರು ದೊಡ್ಡ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಹೆಚ್ಚು ಚಳಿ ಕಂಡುಬರುವುದರಿಂದ ಕಿವಿ ನೋವಿನ ಸಮಸ್ಯೆ ಚಳಿಗಾಲದಲ್ಲಿ ಕಂಡುಬರುವುದು.

ಶೀತದಿಂದಾಗಿ, ಮೂಗಿನಿಂದ ಕಿವಿಗೆ ಹೋಗುವ ಯುಸ್ಟಾಚಿಯನ್ ಟ್ಯೂಬ್ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಸೋಂಕು ಹೆಚ್ಚಾಗುತ್ತದೆ ಮತ್ತು ಉರಿಯೂತದ ಸಮಸ್ಯೆಯು ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ.

ಅಡುಗೆಮನೆಯಲ್ಲಿ ಪ್ರತಿನಿತ್ಯ ಸಿಗುವ ಈರುಳ್ಳಿ ಹಲವು ಆರೋಗ್ಯ ಸಮಸ್ಯೆಗಳಿಗೆ ಉಪಯೋಗಕಾರಿ. ಅದರಲ್ಲೂ ಚಳಿಗಾಲದಲ್ಲಿ ಶೀತ ದಿಂದ ಉಂಟಾಗುವ ಕಿವಿ ನೋವಿನ ಸಮಸ್ಯೆ ಶಮನ ಮಾಡಲು ಈರುಳ್ಳಿ ರಸ ಮನೆ ಮದ್ದಾಗಿದೆ.

ಚಳಿಗಾಲದಲ್ಲಿ ಕಿವಿ ನೋವು ಕಾಣಿಸಿಕೊಂಡ ವೇಳೆ ಎರಡರಿಂದ ಮೂರು ಹನಿ ಈರುಳ್ಳಿ ರಸವನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿ ನೋವು ಉಪಶಮನವಾಗಲಿದೆ.

ಅಡುಗೆ ಮನೆಯಲ್ಲಿ ಸದಾ ಸಿಗುವ ಸಾಸಿವೆ ಎಣ್ಣೆ ಸಹ ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಹಾಯಕವಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಅದರ ಕೆಲವು ಹನಿಗಳನ್ನು ಯಾವ ಕಿವಿ ನೋವಾಗಿದ್ಯೋ ಆ ಕಿವಿಗೆ ಹಾಕಿದರೆ ತಕ್ಷಣಕ್ಕೆ ನೋವುಶಮನ ವಾಗಲಿದೆ.

ಸಾಮಾನ್ಯವಾಗಿ ನಾವು ಬೆಳ್ಳುಳ್ಳಿಯನ್ನು ಬಹುಉಪಯೋಗಿ ಎಂದರೂ ತಪ್ಪಾಗಲಾರದು. ಅಡುಗೆ ಮಾಡುವುದರಿಂದ ಹಿಡಿದು ಮನೆಯಲ್ಲಿನ ಹಲವು ಸಮಸ್ಯೆಗಳ ನಿವಾರಣೆಗೆ ಬೆಳ್ಳುಳ್ಳಿ ಮದ್ದು. ಚಳಿಗಾಲದಲ್ಲಿ ಶೀತ ದಿಂದ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಎಣ್ಣೆಯಿಂದ ನಮಗೆ ಪರಿಹಾರ ಸಿಗಲಿದೆ.

ಅಡುಗೆಯಲ್ಲಿ ಉಪ್ಪಿದ್ದರೆ ಅಷ್ಟೇ ಊಟದ ರುಚಿ.ಅಲ್ಲದೇ ಉಪ್ಪು ಮೈಕೈ ನೋವು ಶಮನ ಮಾಡಲು ಸಹಕಾರಿ. ಅದೇ ರೀತಿ ಉಪ್ಪಿನಿಂದ ಕಿವಿನೋವು ಕೂಡ ಕಡಿಮೆ ಮಾಡಿಕೊಳ್ಳಬಹುದು.

ಬಾಣಲೆಯಲ್ಲಿ ಉಪ್ಪನ್ನು ಹಾಕಿ ಬಿಸಿ ಮಾಡಿ. ಇದಾದ ನಂತರ ಬಟ್ಟೆಯಲ್ಲಿ ಹಾಕಿ ಅದನ್ನು ಕಟ್ಟಿ. ಅದರ ಬಿಸಿಯನ್ನು ಕಿವಿಗೆ ಮುಟ್ಟಿಸಿ. ಅದರಿಂದ ಹೊರಹೊಮ್ಮುವ ಶಾಖದಿಂದ ನೋವು ದೂರವಾಗುತ್ತದೆ. ಈ ರೀತಿಯಾಗಿ, ಬಿಸಿನೀರಿನ ಬಾಟಲಿಯನ್ನು ಸಹ ಬಳಸಬಹುದು.

ಇನ್ನು ತೀವ್ರ ಕಿವಿನೋವು ಕಾಣಿಸುತ್ತಿದ್ದರೆ, ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ರೀತಿಯ ಪರೀಕ್ಷೆ ಮಾಡಿಸಿಕೊಂಡು, ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತ.

RELATED ARTICLES
- Advertisment -
Google search engine

Most Popular