ಬೆಂಗಳೂರು: ನಟಿ ರನ್ಯಾರಾವ್ ಕುರಿತು ಅಸಭ್ಯ ಪದ ಬಳಸಿದ ಆರೋಪ ಸಂಬಂಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗಪ್ಪ ರೆಡ್ಡಿ ಲೇಔಟ್ ನಿವಾಸಿ, ವೈದ್ಯೆ ಅಕುಲಾ ಅನುರಾಧ ಎಂಬವರು ನೀಡಿದ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮಾ. 17ರಂದು ವಿಜಯಪುರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಯತ್ನಾಳ್, ರನ್ಯಾ ಯಾರ ಜತೆ ಸಂಬಂಧ ಹೊಂದಿದ್ದಾರೆ, ಎಲ್ಲಿಂದ ಚಿನ್ನ ತಂದರು ಎಂಬ ಮಾಹಿತಿ ತೆಗೆದುಕೊಂಡಿದ್ದೇನೆ. ಅಲ್ಲದೇ ಆಕೆ ಎಲ್ಲೆಲ್ಲಿ ಚಿನ್ನ ಇಟ್ಟುಕೊಂಡು ಬಂದಿದ್ದಾಳೆ ಎಂಬ ಬಗ್ಗೆ ಅಶ್ಲೀಲ ಪದ ಬಳಸಿದ್ದಾರೆ.
ರನ್ಯಾ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ನಟಿಯ ಗೌರವ, ಚಾರಿತ್ರ್ಯಕ್ಕೆ ಧಕ್ಕೆ ಬರುವ ರೀತಿ ಹೇಳಿಕೆ ನೀಡಿರುವ ಯತ್ನಾಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕುಲಾ ಕೋರಿದ್ದಾರೆ.