Saturday, April 12, 2025
Google search engine

HomeUncategorizedರಾಷ್ಟ್ರೀಯಉತ್ತರ ಪ್ರದೇಶ ಉಪಚುನಾವಣೆ : ನಿಯಮ ಉಲ್ಲಂಘನೆ; 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣಾ ಆಯೋಗ

ಉತ್ತರ ಪ್ರದೇಶ ಉಪಚುನಾವಣೆ : ನಿಯಮ ಉಲ್ಲಂಘನೆ; 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣಾ ಆಯೋಗ

ಲಕ್ನೋ: ಮತದಾರರ ಗುರುತನ್ನು ಪರಿಶೀಲಿಸುವ ವಿವಾದ ಭುಗಿಲೆದ್ದ ನಂತರ ಉತ್ತರ ಪ್ರದೇಶದಲ್ಲಿ ನ್ಯಾಯಸಮ್ಮತವಾದ ಉಪಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣ ಆಯೋಗವು ಬುಧವಾರ(ನ20) ಅಧಿಕಾರಿಗಳನ್ನು ಕೇಳಿದೆ. ಸಮಾಜವಾದಿ ಪಕ್ಷದ ದೂರುಗಳ ಆಧಾರದ ಮೇಲೆ ಮತದಾರರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಸಂಸ್ಥೆ ಕನಿಷ್ಠ ಏಳು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿದೆ.

“ಯಾವುದೇ ಅರ್ಹ ಮತದಾರರನ್ನು ಮತದಾನದಿಂದ ತಡೆಯಬಾರದು. ಮತದಾನದ ಸಮಯದಲ್ಲಿ ಯಾವುದೇ ರೀತಿಯ ಪಕ್ಷಪಾತ ಧೋರಣೆಯನ್ನು ಸಹಿಸಲಾಗುವುದಿಲ್ಲ. ದೂರು ಸ್ವೀಕರಿಸಿದ ತತ್ ಕ್ಷಣ ತನಿಖೆ ನಡೆಸಲಾಗುವುದು. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಅಮಾನತುಗೊಂಡ ಏಳು ಮಂದಿ ಅಧಿಕಾರಿಗಳಲ್ಲಿ ತಲಾ ಇಬ್ಬರು ಕಾನ್ಪುರ ಜಿಲ್ಲೆ ಮತ್ತು ಮುಜಾಫರ್‌ನಗರ ಜಿಲ್ಲೆಯವರು. ಮೂರು ಮಂದಿ ಮೊರಾದಾಬಾದ್‌ನವರು.

ಪ್ರಸ್ತುತ 9, ಗಾಜಿಯಾಬಾದ್, ಕತೇಹಾರಿ, ಖೈರ್, ಕುಂದರ್ಕಿ, ಕರ್ಹಾಲ್, ಮಜವಾನ್, ಮೀರಾಪುರ್, ಫುಲ್ಪುರ್ ಮತ್ತು ಸಿಸಾಮಾವು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನ್ಯಾಯಸಮ್ಮತ ಮತ್ತು ಸುಗಮ ಮತದಾನವನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

“ನಾವು ಹಲವಾರು ದೂರುಗಳನ್ನು ನೀಡಿದ್ದೇವೆ. ಚುನಾವಣ ಆಯೋಗದ ಇಂದ್ರಿಯಗಳು ಕೆಲಸ ಮಾಡುತ್ತಿಲ್ಲ ಎಂದು ತೋರುತ್ತಿದೆ. ಎಷ್ಟು ದೂರುಗಳು ಬಂದರೂ ಅದು ನೋಡುವುದಿಲ್ಲ ಮತ್ತು ಕೇಳುವುದಿಲ್ಲ. ಬಿಜೆಪಿ ಈ ಉಪಚುನಾವಣೆಗಳನ್ನು ಮತದಿಂದ ವಂಚನೆ ಮೂಲಕ ಗೆಲ್ಲಲು ಬಯಸಿದೆ. ಸೋಲು, ಬಿಜೆಪಿ ಆಡಳಿತದ ಮೇಲೆ ಫೌಲ್ ಪ್ಲೇನಲ್ಲಿ ತೊಡಗುವಂತೆ ಒತ್ತಡ ಹೇರುತ್ತಿದೆ” ಎಂದು ಸಮಾಜವಾದಿ ಪಕ್ಷದ ನಾಯಕ , ಮಾಜಿ ಸಿಎಂ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular