Tuesday, April 8, 2025
Google search engine

Homeಅಪರಾಧಉತ್ತರ ಪ್ರದೇಶ: ಪತಿ, ಪತ್ನಿ, ಮಗನ ಕತ್ತು ಸೀಳಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಉತ್ತರ ಪ್ರದೇಶ: ಪತಿ, ಪತ್ನಿ, ಮಗನ ಕತ್ತು ಸೀಳಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಉತ್ತರ ಪ್ರದೇಶ: ದುಷ್ಕರ್ಮಿಗಳು ಪತಿ, ಪತ್ನಿ ಹಾಗೂ ಮಗನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ ಪಿ ಓಂವಿರ್ ಸಿಂಗ್ ನೇತೃತ್ವದ ಎಸ್‌ಒಜಿ ತಂಡವು ಘಟನಾ ಸ್ಥಳಕ್ಕೆ ತಲುಪಿ ಗಂಟೆಗಳ ಕಾಲ ತನಿಖೆ ನಡೆಸಿತು, ಆದರೆ ಕೊಲೆಯ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಪೊಲೀಸರು ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಖಿಲ್ವಾ ಗ್ರಾಮದ ನಿವಾಸಿ ಮುನ್ಶಿ ಬಿಂದ್ (45) ಮತ್ತು ಅವರ ಪತ್ನಿ ದೇವಂತಿ (40) ಮನೆಯ ಹೊರಗಿನ ಗುಡಿಸಲಿನಲ್ಲಿ ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿದ್ದರು.

ಹಿರಿಯ ಮಗ ರಮಶಿಶ್ (20) ಮನೆಯಲ್ಲಿ ಮಲಗಿದ್ದ. ಕಿರಿಯ ಮಗ ಆಶಿಶ್ ಗ್ರಾಮಕ್ಕೆ ಬಂದಿದ್ದ ಆರ್ಕೆಸ್ಟ್ರಾ ನೋಡಲು ಹೋಗಿದ್ದ. ರಾತ್ರಿ 2 ಗಂಟೆಗೆ ಆಶಿಶ್ ಮನೆಗೆ ಬಂದು ನೋಡಿದಾಗ ಪೋಷಕರು ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ.

ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಎಸ್ಪಿ ಓಂವೀರ್ ಸಿಂಗ್ ಆಗಮಿಸಿ ತನಿಖೆ ಆರಂಭಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ವಿಚಾರಣೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular