Monday, April 21, 2025
Google search engine

HomeUncategorizedರಾಷ್ಟ್ರೀಯಉತ್ತರ ಪ್ರದೇಶ: ರಾತ್ರಿಯಿಂದ ಬೆಳಗಾಗುವಷ್ಟರಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಉತ್ತರ ಪ್ರದೇಶ: ರಾತ್ರಿಯಿಂದ ಬೆಳಗಾಗುವಷ್ಟರಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಉತ್ತರ ಪ್ರದೇಶ: ರಾತ್ರಿಯಿಂದ ಬೆಳಗಾಗುವಷ್ಟರಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಉತ್ತರ ಪ್ರದೇಶದ ಆಮ್ರೋಹಾ ಜಿಲ್ಲೆಯ ಮನೆಯೊಳಗೆ ಕಲ್ಲಿದ್ದಿಲನ್ನು ಸುಟ್ಟಿದ್ದರು, ಅದರ ಹೊಗೆ ದಟ್ಟವಾಗಿ ತುಂಬಿತ್ತು, ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು,  ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಘಟನೆ ವಿವರ:

ಸೋಮವಾರ ರಾತ್ರಿ ಕುಟುಂಬದ ಏಳು ಮಂದಿ ಮಲಗಲು ಹೋಗಿದ್ದು, ಮಂಗಳವಾರ ಸಂಜೆಯಾದರೂ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು. ಬಾಗಿಲು ಮುರಿದು ಮನೆಗೆ ನುಗ್ಗಿದ್ದಾರೆ.

ರಹೀಜುದ್ದೀನ್ ಎಂಬುವರಿಗೆ ಸೇರಿದ ಮನೆಯಾಗಿದ್ದು, ಅವರ ಮೂವರು ಮಕ್ಕಳು ಮತ್ತು ಅವರ ಸಂಬಂಧಿಕರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಸೇರಿದಂತೆ ಭಾರೀ ಪೊಲೀಸ್ ಪಡೆ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ತನಿಖೆ ಆರಂಭಿಸಿದರು.

RELATED ARTICLES
- Advertisment -
Google search engine

Most Popular