ಬದೌನ್: ವ್ಯಕ್ತಿಯೊಬ್ಬ ಪ್ರೇಯಸಿಯನ್ನು ಮಾಡಿ ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಹಿಳೆಯ ಶವವನ್ನು ವಶಪಡಿಸಿಕೊಂಡಿದ್ದು, ಪ್ರಿಯಕರ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಫೆಬ್ರವರಿ 18 ರಿಂದ ಡ್ಯಾನ್ಸರ್ ನಾಪತ್ತೆಯಾಗಿದ್ದರು ಮತ್ತು ಆಕೆಯ ಪ್ರೇಮಿ ಪೊಲೀಸರೊಂದಿಗೆ ಆಕೆಯನ್ನು ಹುಡುಕುತ್ತಿರುವಂತೆ ನಟಿಸುತ್ತಲೇ ಇದ್ದ. ಫೆಬ್ರವರಿ 28ರಂದು ಮುಸ್ಕಾನ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರನ್ನು ಆಕೆಯ ಪೋಷಕರು ಸಲ್ಲಿಸಿದ್ದರು.
ಫೆಬ್ರವರಿ 18ರಿಂದ ಆಕೆ ಕಾಣೆಯಾಗಿದ್ದಾಳೆ. ಆಕೆಯ ಚಿಕ್ಕಪ್ಪ ಮತ್ತು ಸಹೋದರಿ ಹುಡುಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಮುಸ್ಕಾನ್ ಅವರನ್ನು ಪ್ರೇಮಿ ರಿಜ್ವಾನ್ ಅಪಹರಿಸಿ ಕೊಲೆ ಮಾಡಿದ್ದಾನೆ. ಆಕೆಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲಾಹಪುರ ಭೋಗಿ ಗ್ರಾಮದ ನಿವಾಸಿ ರಿಜ್ವಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.