Thursday, April 3, 2025
Google search engine

HomeUncategorizedರಾಷ್ಟ್ರೀಯ4 ಜಿಲ್ಲೆಯ 11 ನಗರಗಳ ಹೆಸರು ಮರುನಾಮಕರಣ: ಉತ್ತರಾಖಂಡ ಸಿಎಂ ಆದೇಶ

4 ಜಿಲ್ಲೆಯ 11 ನಗರಗಳ ಹೆಸರು ಮರುನಾಮಕರಣ: ಉತ್ತರಾಖಂಡ ಸಿಎಂ ಆದೇಶ

ಡೆಹ್ರಾಡೂನ್: 4 ಜಿಲ್ಲೆಯ 11 ನಗರಗಳ ಹೆಸರು ಮರುನಾಮಕಾರಣ ಮಾಡಲಾಗುವುದು. ಸಾರ್ವಜನಿಕ ಭಾವನೆ ಮತ್ತು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಈ ಸ್ಥಳಗಳ ಮರುನಾಮಕರಣ ಮಾಡಲಾಗುತ್ತದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಆದೇಶಿಸಿದ್ದಾರೆ.

ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದಂತೆ, ಹರಿದ್ವಾರ ಜಿಲ್ಲೆಯ ಔರಂಗಜೇಬಪುರವನ್ನು ಶಿವಾಜಿ ನಗರ, ಜಂಜಿಯಾಲಿಯನ್ನು ಆರ್ಯ ನಗರ, ಚೌಧಪುರವನ್ನು ಜ್ಯೋತಿಬಾ ಫುಲೆ ನಗರ, ಮೊಹಮ್ಮದ್‌ಪುರ ಜಾಟ್ ಅನ್ನು ಮೋಹನ್‌ಪುರ ಜಾಟ್, ಖಾನ್ಪುರ್ ಖುರೇಷಿಯನ್ನು ಅಂಬೇಡ್ಕರ್ ನಗರ, ಧೀರ್ಪುರವನ್ನು ನಂದಪುರ, ಅಕ್ಬರ್ಪುರ್ ಫಜಲ್ಪುರವನ್ನು ವಿಜಯನಗರ ಮತ್ತು ಖಾನ್ಪುರವನ್ನು ಶ್ರೀ ಕೃಷ್ಣಪುರ ಎಂದು ಬದಲಾಯಿಸಲಾಗುವುದು.

ಡೆಹ್ರಾಡೂನ್ ಜಿಲ್ಲೆಯಲ್ಲಿ, ಪಿರುವಾಲವನ್ನು ರಾಮ್‌ಜಿ ವಾಲಾ, ಪೀರುವಾಳವನ್ನು ಕೇಸರಿ ನಗರ, ಚೌಧಪುರ್ ಖುರ್ದ್ ಅನ್ನು ಪೃಥ್ವಿರಾಜ್ ನಗರ ಮತ್ತು ಅಬ್ದುಲ್ಲಾಪುರವನ್ನು ದಶರಥನಗರ ಎಂದು, ನೈನಿತಾಲ್ ಜಿಲ್ಲೆಯಲ್ಲಿ, ನವಾಬಿ ರಸ್ತೆಯನ್ನು ಅಟಲ್ ಮಾರ್ಗ ಎಂದು ಮರುನಾಮಕರಣ ಮಾಡಲಾಗುವುದು ಮತ್ತು ಪಂಚಕ್ಕಿ ಐಟಿಐ ರಸ್ತೆಯನ್ನು ಗುರು ಗೋವಲ್ಕರ್ ಮಾರ್ಗ ಎಂದು ಹೆಸರಿಡಲಾಗುವುದು. ಉಧಮ್ ಸಿಂಗ್ ನಗರ ಜಿಲ್ಲೆಯ ನಗರ ಪಂಚಾಯತ್ ಸುಲ್ತಾನ್‌ಪುರ ಪಟ್ಟಿಯನ್ನು ಕೌಶಲ್ಯ ಪುರಿ ಎಂದು ಮರುನಾಮಕರಣ ಮಾಡಲಾಗುತ್ತದೆ.

RELATED ARTICLES
- Advertisment -
Google search engine

Most Popular