Friday, April 4, 2025
Google search engine

HomeUncategorizedರಾಷ್ಟ್ರೀಯಉತ್ತರಾಖಂಡ: ಕಂದಕಕ್ಕೆ ಉರುಳಿದ ಎಸ್‌ ಯುವಿ ಕಾರು- 9 ಮಂದಿ ಸಾವು, ಇಬ್ಬರು ಗಂಭೀರ

ಉತ್ತರಾಖಂಡ: ಕಂದಕಕ್ಕೆ ಉರುಳಿದ ಎಸ್‌ ಯುವಿ ಕಾರು- 9 ಮಂದಿ ಸಾವು, ಇಬ್ಬರು ಗಂಭೀರ

ಉತ್ತರಾಖಂಡ: ಉತ್ತರಾಖಂಡದ ಪಿಥೋರಗಢದಲ್ಲಿ ಎಸ್‌ ಯುವಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಎಸ್‌ ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 11 ಜನರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಕುಮಾವ್ನ್ ನಿಲೇಶ್ ಆನಂದ್ ಭರ್ನೆ ಹೇಳಿದ್ದಾರೆ.

ಪಿಥೋರಗಢ ಜಿಲ್ಲೆಯ ಮುನ್ಸಿಯಾರಿ ಬ್ಲಾಕ್‌ ನ ಹೊಕ್ರಾದಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೃತರು ಬಾಗೇಶ್ವರ ಜಿಲ್ಲೆಯ ಸಾಮಾ ಗ್ರಾಮದಿಂದ ಹೊಕ್ರಾದಲ್ಲಿರುವ ಕೋಕಿಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮತ್ತು ಎಸ್‌ ಡಿಆರ್‌ ಎಫ್ ತಂಡಗಳಿಂದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular