Thursday, May 14, 2026
Google search engine

Homeದೇಶಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ

ತಿರುವನಂತಪುರಂ: ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದೆ ಈ ಹಿನ್ನೆಲೆಯಲ್ಲಿ ಕೊನೆಗೂ ನೂತನ ಮುಖ್ಯಮಂತ್ರಿಯನ್ನಾಗಿ ವಿ.ಡಿ.ಸತೀಶನ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಿಎಂ ಸ್ಥಾನಕ್ಕಾಗಿ ಕೆ.ಸಿ.ವೇಣುಗೋಪಾಲ್ ಹಾಗೂ ವಿ.ಡಿ.ಸತೀಷನ್ ನಡಿವೆ ಕೊನೇ ಹಂತದವರೆಗೂ ಪೈಪೋಟಿ ನಡೆದಿತ್ತು. ಆದರೆ ವಿ.ಡಿ.ಸತೀಶನ್ ಅವರಿಗೆ ಕೇರಳ ರಾಜ್ಯಾದ್ಯಂತ ಸಾರ್ವಜನಿಕ ಜನಬೆಂಬಲ ಹೆಚ್ಚತ್ತು. ಈ ಹಿನ್ನೆಲೆಯಲ್ಲಿ ಹಾಗೂ ವಯನಾಡ್ ಕ್ಷೇತ್ರದಲ್ಲಿ ವೇಣುಗೋಪಾಲ್ ವಿರುದ್ಧ ಪೋಸ್ಟರ್ ಅಭಿಯಾನ ನಡೆಯುತ್ತಿರುವ ಕಾರಣಕ್ಕೆ ವಿ.ಡಿ.ಸತೀಷನ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಗಿದೆ.

ವಿ.ಡಿ.ಸತೀಶನ್ ಪರವೂರು ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2021ರಲ್ಲಿ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕೂಡ ಆಗಿದ್ದವರು. ರಾಜ್ಯದಲ್ಲಿ ಸತೀಷನ್ ಅವರಿಗೆ ಭಾರಿ ಬೆಂಬಲ ಕೂಡ ಇರುವುದರಿಂದ ನೂತನ ಮುಖ್ಯಮಂತ್ರಿಯಾಗಿ ಸತೀಷನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.

RELATED ARTICLES
- Advertisment -
Google search engine

Most Popular