ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ
ಮಡಿಕೇರಿ: ಸಮೀಪದ ಗೋಣಿಕೊಪ್ಪ ಸಮೀಪದ ಕೊಟ್ಟಗೆರಿ ಗ್ರಾಮದ ಶೀಲಾ ಮೋಹನ್ ದಂಪತಿಯ ಪುತ್ರಿ ವಿ.ಎಂ ನೇಹಾ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಪೊನ್ನಂಪೇಟೆಯ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರಿ ಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಕನ್ನಡ ವಿಷಯದಲ್ಲಿ 82, ಇಂಗ್ಲಿಷ್ ವಿಷಯದಲ್ಲಿ 91, ಭತಶಾಸ್ತ್ರ ವಿಷಯದಲ್ಲಿ 94, ರಸಾಯನಶಾಸ್ತ್ರ ವಿಷಯದಲ್ಲಿ 87, ಗಣಿತದಲ್ಲಿ 89 ಮತ್ತು ಜೀವಶಾಸ್ತ್ರ ವಿಷಯದಲ್ಲಿ 98 ಪಡೆಯುವುದರ ಮೂಲಕ 600ಕ್ಕೆ 541ಅಂಕಗಳನ್ನು ಪಡೆದು, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.