ಮೈಸೂರು: ಹೌಸ್‌ವೇರ್ಸ್ ಪ್ರೈ. ಲಿ ಅಧ್ಯಕ್ಷರು ವಿ.ಪ್ರಫುಲ್ಲ ಚಂದ್ರ (೯೭) ಪಾಲುದಾರರು ಮೈಸೂರ್ ಟಾಯ್ಸ ಕಂಪನಿ ಮೈಸೂರು ಮತ್ತು ಅಧ್ಯಕ್ಷರು ಮೈಸೂರ್ ಹೌಸ್ ವೇರ್ಸ ಪ್ರೈ (ಲಿಮಿಟೆಡ್) ಮೈಸೂರು ಇವರು ಇಂದು ಮಧ್ಯಾಹ್ನ (ದಿನಾಂಕ ೧೫ ಸೆಪ್ಟಂಬರ್ ೨೪ ) ೩:೦೦ಗೆ ನಿಧನರಾಗಿದ್ದಾರೆ.
ಇವರಿಗೆ ಮಗ ಸತೀಶ್ ಚಂದ್ರ ವ್ಯವಸ್ಥಾಪಕ ನಿರ್ದೇಶಕರು ಗ್ಲೋಬಲ್ ಟೆಕ್ ಪಾರ್ಕ್ ಬೆಂಗಳೂರು ಹಾಗೂ ಮಗಳು ಭಾರತಿ ದೇವಿ ಮತ್ತು ಮೊಮ್ಮಕ್ಕಳು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೈಸೂರು ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷರಾಗಿ ವಿವಿಧ ಸ್ಥರಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ನಾಳೆ ದಿನಾಂಕ ೧೬ ಸೆಪ್ಟೆಂಬರ್ ೨೦೨೪ ಬೆಳಗ್ಗೆ ೧೧ ಗಂಟೆಗೆ ಗೋಕುಲಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇವರ ನಿಧನಕ್ಕೆ ಮೈಸೂರು ಲಯನ್ಸ್ ಸಂಸ್ಥೆ ಹಾಗೂ ಮದ್ದೂರಿನ ಹೆಚ್ ಕೆ ವೀರಣ್ಣಗೌಡ ಶಿಕ್ಷಣ ಸಂಸ್ಥೆಯ ಬೋಧಕ ಬೋಧಕೇತರರು ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಗಳು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.