ತುಮಕೂರು: ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಬಿಜೆಪಿಯು ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ವಿಧಾನಸಭೆ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಹೀಗಾಗಿ ವರ್ಷಕ್ಕಿಂತ ಮೊದಲೇ ಬಿಜೆಪಿ ಚನಾವಣೆಗೆ ಭರ್ಜರಿ ತಯಾರಿ ಆರಂಭಿಸಿದ್ದು, ಈ ಬಾರಿ ಅಭ್ಯರ್ಥಿಗಳಲ್ಲಿ ಮಹತ್ತರ ಬದಲಾವಣೆಗಳಾಗುವ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ತುಮಕೂರು ಸಂಸದ ಜಿ.ಎನ್ ಬಸವರಾಜು ಮಾತನಾಡಿದ್ದು, ವಿ.ಸೋಮಣ್ಣ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡ್ತಾರೆ. ಅವರ ಬೆಂಬಲಕ್ಕೆ ನಿಲ್ಲಿ ಎಂದು ವೀರಶೈವ ಸಮಾಜಕ್ಕೆ ಸಂದೇಶ ನೀಡಿದ್ದಾರೆ.
ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಜಿ.ಎಸ್ ಬಸವರಾಜು, ಸಮಾಜ ಒಗ್ಗಟ್ಟಾಗಿದ್ರೆ ಏನುಬೇಕಾದ್ರೂ ಸಾಧಿಸಬಹುದು. ನಿಮ್ಮಲ್ಲೇ ಕಿತ್ತಾಡಿದ್ರೆ, ನಿಮ್ಮನ್ನೇ ಒದ್ದು ಓಡಿಸುತ್ತಾರೆ. ಅದು ಕೂಡ ಸನ್ನಿತವಾಗಿದೆ. ಯಾವಾಗ ಒಗ್ಗಟ್ಟು ಮುರಿಯುತ್ತೆ ಏನೇನು ಮಾಡ್ಬೇಕು ಅನ್ನೋದು ಅವರಿಗೆ ಗೊತ್ತಿದೆ. ಕೆಲವೇ ಜನ ಇದ್ದಿರಾ ಒಟ್ಟಾಗಿರಿ ಎಚ್ಚರಿಕೆ ಕೊಡ್ತಿದ್ದಿನಿ ಎಂದಿದ್ದಾರೆ.
ನನ್ನದಾಯ್ತು, ನನ್ನ ಸೀಟ್ ನಾ ಸೋಮಣ್ಣಗೆ ಕೊಡ್ತಾರೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ, ನಾನು ದೆಹಲಿಗೆ ಹೋಗಿದ್ದಾಗ ಹೇಳಿದ್ದೇನೆ. ಮುಂದೆ ಬರೋರನ್ನು ಉಪಯೋಗಿಸಿಕೊಳ್ಳಿ, ಇಬ್ಬಗೆ ನೀತಿ ಮಾಡಿಕೊಳ್ಳಬೇಡಿ. ಇವರ ಮೇಲೆ ಅವರನ್ನು ಅವರ ಮೇಲೆ ಇವರನ್ನು ಎತ್ತಿಕಟ್ಟ ಬೇಡಿ. ಮುಂದೆ ತುಂಬಾ ಜನ ಬರಬೇಕು ಎಂದರು.
8 ಸಾಲ ನಿಂತಿದ್ದೇನೆ, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತ್ತಿದ್ದೇನೆ. ನಮ್ಮವರೇ ನನ್ನ ಸೋಲಿಸಿದ್ದು, ನಾನು ಸೋತು ಒಂದ್ರೆ ಗೆದ್ರು ಒಂದೇ ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ ಎಂದರು.