Friday, April 18, 2025
Google search engine

Homeರಾಜ್ಯಸುದ್ದಿಜಾಲವಿ.ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ವಿ.ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ತಾಲೂಕಿನ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗ ಹಾಗೂ ಡಾ.ಮೋಹನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಚಾಮರಾಜನಗರ ಲೋಕಸಭಾ ಸಂಸದ ವಿ.ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮೋಹನ್, ಸಂಸದ ವಿ.ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬದ ಹಿನ್ನಲೆ ಜಿಲ್ಲೆಯ 8 ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ನಾನು ಕೂಡಾ ಆಕಾಂಕ್ಷಿಯಾಗಿದ್ದೆನೆ. ನಮ್ಮ ಮಾವ ವಿ.ಶ್ರೀನಿವಾಸಪ್ರಸಾದ್ ಕೂಡ ಸ್ಪರ್ಧಿಸಲು ನನಗೆ ಸಹಕಾರ ನೀಡಿದ್ದು ಈ ಹಿನ್ನಲೆ ಕ್ಷೇತ್ರದಾದ್ಯಂತ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಮತದಾರರ ಹತ್ತಿರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ. ಬಿಜೆಪಿ ವರಿಷ್ಠರು ಅವಕಾಶ ಮಾಡಿಕೊಟ್ಟರೇ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದರು.

ಈ ವೇಳೆ ತಾಲೂಕು ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದ ಹಾಗೂ ಡಾ.ಮೋಹನ್ ಸ್ನೇಹ ಬಳದ ಸದಸ್ಯರಾದ ಕೆ.ಅರ್.ಲೋಕೇಶ್, ಪುತ್ತನಪುರ ಪಿ.ಎಂ.ಮಹೇಶ್, ಕುಮಾರ್ ಕಾಡಳ್ಳಿ, ರಾಜುಗೌಡ, ಅಗತ್ ಗೌಡನಹಳ್ಳಿ ಬಸವರಾಜು, ಪಡಗೂರು ಸಂಪತ್ತು, ಹರೀಶ್ವಚಂದ್ರ, ಮಹೇಶ್ ಕಿರಣ್, ಶಿವಕುಮಾರ್, ಅರೇಪುರ ರವಿ, ಶೈಲೇಂದ್ರ, ರಾಜೇಂದ್ರ ಶಾನಡ್ರಹಳ್ಳಿ, ಸಾಗರ್ ಸೇರಿದಂತೆ ಇತರರು ಹಾಜರಿದ್ದರು.


RELATED ARTICLES
- Advertisment -
Google search engine

Most Popular