Wednesday, April 23, 2025
Google search engine

Homeರಾಜಕೀಯವಿ ಶ್ರೀನಿವಾಸ ಪ್ರಸಾದ್  ಅವರ ಸಾವು ಆಘಾತವನ್ನುಂಟು ಮಾಡಿದೆ: ಜಿ ಟಿ ದೇವೇಗೌಡ

ವಿ ಶ್ರೀನಿವಾಸ ಪ್ರಸಾದ್  ಅವರ ಸಾವು ಆಘಾತವನ್ನುಂಟು ಮಾಡಿದೆ: ಜಿ ಟಿ ದೇವೇಗೌಡ

ಮೈಸೂರು: ಇಂದು ಬೆಳಗ್ಗೆ ವಿಧಿವಶರಾದ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರೊಂದಿಗೆ ದಶಕಗಳ ಕಾಲ ಒಡನಾಟ ಹೊಂದಿದ್ದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಇಂದು ನಗರದಲ್ಲಿರುವ ಪ್ರಸಾದ ಮನೆಗೆ ತೆರಳಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, 50 ವರ್ಷಗಳಷ್ಟು ಕಾಲ ಜನನಾಯಕನಾಗಿ ಕೆಲಸ ಮಾಡಿದ ಪ್ರಸಾದ್ ಅವರು ಶೋಷಿತರ ಧ್ವನಿಯಾಗಿದ್ದರು ಮತ್ತು ಅವರಲ್ಲಿ ಶಕ್ತಿ ತುಂಬವ ಕೆಲಸ ಮಾಡಿದ್ದರು, ಅವರ ಸಾವು ಆಘಾತವನ್ನುಂಟು ಮಾಡಿದೆ ಎಂದರು.

ಕಳೆದ ವರ್ಷವಷ್ಟೇ ಅವರು ಮೈಸೂರಲ್ಲಿ ಪುಸ್ತಕವೊಂದನ್ನು ಬಿಡುಗಡೆ ಮಾಡಿ ತಮ್ಮ ಸುದೀರ್ಘ ರಾಜಕೀಯ ಬದುಕಿಗೆ ವಿದಾಯ ಹೇಳಿದ್ದರು. ವಿದ್ಯಾರ್ಥಿಯಿಂದ ದೆಸೆಯಿಂದಲೇ ರಾಜಕೀಯಕ್ಕೆ ಧುಮುಕಿದ ಶ್ರೀನಿವಾಸ ಪ್ರಸಾದ್, 1980 ರಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದರು ಎಂದು ದೇವೇಗೌಡ ಹೇಳಿದರು. 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕಂದಾಯ ಸಚಿವರಾಗಿದ್ದ ಅವರು ರೈತರಿಗೆ ನೆರವಾಗುವ ಅನೇಕ ಕೆಲಸ ಮಾಡಿದರಲ್ಲದೆ ಮೈಸೂರು ನಗರದಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಟ್ಟಡ ತಲೆಯೆತ್ತುವಲ್ಲಿ ಪ್ರಮುಖ ಪಾತ್ರವಹಿಸಿದರೆಂದು ದೇವೇಗೌಡ ಹೇಳಿದರು.

RELATED ARTICLES
- Advertisment -
Google search engine

Most Popular