ಚಾಮರಾಜನಗರ: ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಸಂಗ್ರಹಿಸಿ ಯುವ ಪೀಳಿಗೆಗೆ ನೀಡಿದವರು ಹಳಕಟ್ಟಿಯವರು ಎಂದು ತಾಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ವಚನ ಪಿತಾಮಹ . ಫ ಗು.ಹಳಕಟ್ಟಿ ರವರ ಕೊಡುಗೆಗಳ ಬಗ್ಗೆ ಮಾತನಾಡುತ್ತಾ ವಚನಗಳು ಕನ್ನಡ ಸಾಹಿತ್ಯ ಪರಂಪರೆಯ ದಿವ್ಯ ಮೌಲ್ಯ ಸಾಹಿತ್ಯವಾಗಿದೆ. ಮಾನವನ ಜೀವನದ ಪ್ರತಿಕ್ಷಣವೂ ವಚನಗಳ ಅಧ್ಯಯನದ ಮೂಲಕ ತಮ್ಮ ತನವನ್ನು ಹೆಚ್ಚಿಸಿಕೊಳ್ಳಲು, ಮಾನವೀಯ ಮೌಲ್ಯಗಳನ್ನು ಹರಡಲು, ಮನುಷ್ಯ ಮನುಷ್ಯನಾಗಿ ಬದುಕಲು ,ವಚನಗಳು ದಾರಿದೀಪವಾಗಿವೆ. ವಚನಗಳು ಕನ್ನಡಿಗರ ಅಮೂಲ್ಯ ಸಂಪತ್ತು.ಸರ್ವರೂ ಕೂಡ ಅದರ ಆದರ್ಶಗಳನ್ನು ಮೌಲ್ಯ ಚಿಂತನೆಗಳನ್ನು ಅರಿಯಬೇಕಿದೆ. ಮಾನವ ತನ್ನ ಜೀವನದ ವ್ಯಕ್ತಿತ್ವ ನಿರ್ಮಾಣಕ್ಕೆ ವಚನಗಳ ಜ್ಞಾನದ ಅರಿವು ಮಹತ್ವದ್ದಾಗ ಬೇಕು. ವಚನಗಳು ಸಾಮರಸ್ಯವನ್ನು ಬೆಳೆಸುತ್ತದೆ. ಮನುಷ್ಯ ಮನುಷ್ಯನಾಗಿ ಅರ್ಥ ಮಾಡಿಕೊಳ್ಳಲು ವಚನಗಳಿಂದ ಸಾಧ್ಯವಿದೆ .ಕನ್ನಡ ಸಾಹಿತ್ಯದ ಶ್ರೇಷ್ಠ ಪರಂಪರೆ ವಚನ ಸಾಹಿತ್ಯ . ಜನಸಾಮಾನ್ಯರ ಸರಳ ಭಾಷೆಯಲ್ಲಿ ವಿವರಿಸಿದ ಚಿಂತಕರ ವಚನಗಳನ್ನು ಉಳಿಸಿ ಯುವ ಪೀಳಿಗೆಗೆ ನೀಡಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.
ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಗರಹಳ್ಳಿ ನಾಗರಾಜು ವಚನಗಳ ಬಗ್ಗೆ ಮಾತನಾಡಿ ಹಳಕಟ್ಟಿಯವರು ಕಾನೂನು ಪದವೀಧರರಾಗಿ, ವಿನಾಶದ ಅಂಚಿನಲ್ಲಿದ್ದ ವಚನಗಳೆಲ್ಲವನ್ನು ಸಂಗ್ರಹಿಸಿ ,ಸ್ಪಷ್ಟ ರೂಪವನ್ನು ನೀಡಿದ ಮಹಾನ್ ವ್ಯಕ್ತಿ. ಹಳಕಟ್ಟಿಯವರು ತಮ್ಮ ಇಡೀ ಜೀವನವನ್ನು ವಚನಗಳಿಗಾಗಿ ವಚನದ ಸಂಗ್ರಹಣೆಗಾಗಿ ಸಂಶೋಧನೆಗಾಗಿ ಮೀಸಲಿಟ್ಟವರು. ಕನ್ನಡ ಸಾಹಿತ್ಯ ಪರಿಷತ್ತು ವಚನ ದಿನಾಚರಣೆಯ ಮೂಲಕ ವಚನದ ಜಾಗೃತಿಯನ್ನು ಮಾಡುತ್ತಿರುವುದು ಸಂತೋಷವೆಂದು ತಿಳಿಸಿದರು.
ಮಾಜಿನಗರ ಸಭಾ ಸದಸ್ಯ ಪದ್ಮ ಪುರುಷೋತ್ತಮ್ ರವರು ಹಳಕಟ್ಟಿ ಯವರ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಉದ್ಘಾಟನೆ ನೆರವೇರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ರವಿಚಂದ್ರಪ್ರಸಾದ್, ಶಿವಲಿಂಗಮೂರ್ತಿ, ಸರಸ್ವತಿ ಗೋವಿಂದರಾಜು , ರೇತನ್ ಮಾದೇವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.