Friday, April 11, 2025
Google search engine

Homeರಾಜ್ಯಸುದ್ದಿಜಾಲಚುಂಚನಕಟ್ಟೆ: ವೈಕುಂಠ ಏಕಾದಶಿ ಹಿನ್ನೆಲೆ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಮೂಲ ಮೂರ್ತಿಗಳಿಗೆ ತೋ...

ಚುಂಚನಕಟ್ಟೆ: ವೈಕುಂಠ ಏಕಾದಶಿ ಹಿನ್ನೆಲೆ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಮೂಲ ಮೂರ್ತಿಗಳಿಗೆ ತೋ ಮಾಲಾ ಅಲಂಕಾರ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮದ ಶ್ರೀರಾಮ ದೇವಾಲಯದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ನಡೆಯಿತು.ಈ ವೇಳೆ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿಭಾವ ಮೆರೆದರು.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಸುಪ್ರಭಾತ, ಹಾಲು- ಮೊಸರು, ಆರ್ಚಕ ವೃಂದ ಅರಿಶಿನ- ಕುಂಕುಮ, ಎಳನೀರು, ಪಂಚಾಮೃತಾಭಿಷೇಕ ಸೇರಿದಂತೆ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನವರ ಮೂಲ ಮೂರ್ತಿಗಳಿಗೆ ಜಲಾಭಿಷೇಕ ಮಾಡಿದರು. ನಂತರ ಹಲವು ಬಗೆಯ ಪುಷ್ಪಗಳ ತೋಮಾಲಾ ಅಲಂಕರಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.

ಇನ್ನು ಶೃಂಗಾರಗೊಂಡಿದ್ದ ಶ್ರೀರಾಮ, ಲಕ್ಷಣ ಹಾಗೂ ಸೀತಮ್ಮನ ಉತ್ಸವ ಮೂರ್ತಿಗಳನ್ನು ಮುಂಜಾನೆ ಪಲ್ಲಕ್ಕಿ ಮೂಲಕ ಭಕ್ತ ಸಮೂಹ ಗೋವಿಂದಾ..! ಗೋಪಾಲ..! ಎಂಬ ಮಂತ್ರ ಪಠಣದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿಸಿ 5.15ಕ್ಕೆ ದೇವರನ್ನು ಉತ್ತರ ದಿಕ್ಕಿನ ವೈಕುಂಠ ದ್ವಾರದಲ್ಲಿ ಕರೆದಂದು ಪ್ರತಿಷ್ಠಾಪಿಸಿ ಪೂಜಾಗಳನ್ನು ನೆರವೇರಿಸಲಾಯಿತು.

ವೈಕುಂಠ ಸ್ವರ್ಗದ್ವಾರಕ್ಕೆ ಪ್ರವೇಶ:- ಬಳಿಕ ಭಕ್ತರ ಸಮ್ಮುಖದಲ್ಲಿ ನೈವೇದ್ಯ ಮಂಗಳಾರತಿ ನೆರವೇರಿಸಿದ ಆರ್ಚಕರು ಬೆಳಗ್ಗೆ 6.30ರಲ್ಲಿ ಭಕ್ತರಿಗೆ ಸ್ವರ್ಗದ್ವಾರ ಪ್ರವೇಶಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಸಂಜೆವರೆಗೂ ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪ್ರಸಾದ ಸೇವಾರ್ಥದಾದರು.:- ಚುಂಚನಕಟ್ಟೆಯ ಚುಂಗಿಮ ಜನರಲ್ ಸ್ಟೋರ್ ಮಾಲೀಕರಾದ, ಕಮಲಮ್ಮ ಗಿರಿ ಗೌಡ ಬರುವ ಭಕ್ತರಿಗೆ ಬಿಸೀಬೆಳೆ ಬಾತ್, ಕೇಸರಿ ಬಾತ್, ವಡೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಕುಮಾ‌ರ್, ರೇಣುಕಮದು, ಸಿ ಜಿ ಬಾಬು, ಸಿ ಟಿ ವಾಸು, ಸಿ ಕೆ ಕೃಷ್ಣ, ಪಾರುಪತ್ತೆದಾರು ಯತಿರಾಜ್, ಕುಮಾರ್, ಬಿದರಕಟ್ಟೆ ಹಳ್ಳ,ಸೌಮ್ಯಸತೀಶ್, ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವ, ಶೇಷಾದ್ರಿ, ಮಾರುತಿ ಪ್ರಸಾದ್, ಆಗಮಿಕರು ವೇಣುಗೋಪಾಲ್, ಸಿಬ್ಬಂದಿ ಶಿವಣ್ಣ, ತಿಮ್ಮಣ್ಣ ಚಂದ್ರಣ್ಣ, ಅನಂತ್, ತಬಲ ಮಂಜು ಇದ್ದರು.

RELATED ARTICLES
- Advertisment -
Google search engine

Most Popular