ಮದ್ದೂರು: ಮದ್ದೂರು ತಾಲೂಕಿನ ಚಾಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಳಗೆರೆಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಇಂದು ಜರುಗಿತು.
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿತ್ತು. ಸುಮಾರು 12 ಮತ ಹೊಂದಿದ್ದು ಹಿನ್ನೆಲೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಮತಾ ಶಂಕರೇಗೌಡ ಎಂಟು ಮತಗಳನ್ನು ಪಡೆದು ಅಧ್ಯಕ್ಷರಾದರೆ ಪ್ರತಿ ಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುರೇಶ್ 4 ಮತ ಗಳನ್ನು ಪಡೆದು ಪರಾಭವಗೊಂಡರು.ಉಪಾಧ್ಯಕ್ಷರಾಗಿ ಯಾರೂ ಕೂಡ ಅರ್ಜಿ ಸಲ್ಲಿಸದ ಹಿನ್ನೆಲೆ ವಿ ಸಿ ಉಮಾದೇವಿ ಅವಿರೋಧ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಡಿ.ಆಶಾ ಘೋಷಣೆ ಮಾಡಿದರು.
ಈ ವೇಳೆ ನೂತನ ಅಧ್ಯಕ್ಷೆ ಮಮತಾ ಶಂಕರೇಗೌಡ ಮಾತನಾಡಿ 75 ವರ್ಷಗಳ ಹಿಂದಲೂ ನಮ್ಮ ತಾತ ವಿ. ಸಿ .ಬೋರೇಗೌಡರು ನಿರ್ಮಾಣ ಮಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತವನ್ನು ನಾವೇ ನಡೆಸಿಕೊಂಡು ಬಂದಿದ್ದೆವೆ ಇನ್ನು ಮುಂದೆಯೂ ಕೂಡ ಉನ್ನತ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಲ್ಲಾ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಆಶೀರ್ವಾದ ಮಾಡಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.

ಈ ವೇಳೆ ನಿರ್ದೇಶಕರಾದ ಮಹೇಶ್, ಶ್ರೀನಿವಾಸ್, ಶ್ರೀನಿವಾಸ್ ಕುಮಾರ್, ದೊಡ್ಡಣ್ಣ ,ದಿನೇಶ್, ಮುಖಂಡ ಶಂಕರೇಗೌಡ, ಮಾಜಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಲೋಕ್, ಸೇರಿದಂತೆ ಇತರರು ಹಾಜರಿದ್ದರು.