Saturday, April 19, 2025
Google search engine

Homeರಾಜ್ಯವಾಲ್ಮೀಕಿ ನಿಗಮದ ಹಗರಣ: ಬಸನಗೌಡ ದದ್ದಲ್ ಗೆ ಇಡಿ ಬಂಧನದ ಭೀತಿ

ವಾಲ್ಮೀಕಿ ನಿಗಮದ ಹಗರಣ: ಬಸನಗೌಡ ದದ್ದಲ್ ಗೆ ಇಡಿ ಬಂಧನದ ಭೀತಿ

ರಾಯಚೂರು: ವಾಲ್ಮೀಕಿ ನಿಗಮದ ೧೮೭ ಕೋಟಿ ರೂ. ಹಗರಣದ ಪ್ರಕರಣ ಹಿನ್ನೆಲೆ ಇ.ಡಿ ಬಂಧನ ಭೀತಿಯಲ್ಲಿರುವ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಬೆಳಗ್ಗೆ ಯಾರನ್ನೂ ಭೇಟಿಯಾಗದೆ ಮನೆಯಿಂದ ಅವಸರಲ್ಲಿ ಕಾರು ಹತ್ತಿ ಹೋಗಿದ್ದಾರೆ.

ಮಾಧ್ಯಮದವರ ಕಣ್ಣಿಗೆ ಬೀಳುಬಾರದು ಎಂದು ವೇಗವಾಗಿ ಕಾರಿನಲ್ಲಿ ಹೊರಟು ಹೋಗಿದ್ದಾರೆ. ಬೆಂಗಳೂರು ಕಡೆಗೆ ತಮ್ಮ ಆಪ್ತರ ಜೊತೆ ಹೊರಟಿದ್ದಾರೆ ಎನ್ನಲಾಗಿದೆ. ತಮ್ಮ ಕಾರನ್ನ ಬಳಸದೇ ಕಾರ್ಯಕರ್ತನ ಕ್ರೇಟಾ ಕಾರ್‌ನಲ್ಲಿ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ದದ್ದಲ್‌ಗೆ ಈಗಾಗಲೇ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಇ.ಡಿ ಬಂಧನ ಭೀತಿಯಲ್ಲಿ ಶಾಸಕರಿದ್ದಾರೆ. ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರರನ್ನು ಬಂಧಿಸಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular