ನಂಜನಗೂಡು: ನಂಜನಗೂಡು ನಗರದಲ್ಲಿ ಪ್ರತಿ ಮನೆಗಳಲ್ಲೂ ವರಮಹಾಲಕ್ಷ್ಮಿ ಹಬ್ಬ ಪ್ರತಿ ಮನೆಗಳಲ್ಲೂ ಕೂಡ ಮುತ್ತೈದರು ವರಮಹಾಲಕ್ಷ್ಮಿ ಪೂಜೆ ಮಾಡಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಪ್ರಸಾದ ನೀಡಿದರು.
ಬೆಳಗಿನ ಜಾವ ಐದರಿಂದ ಆರು ಗಂಟೆ ಒಳಗೆ ತಾಯಿ ವರಮಹಾಲಕ್ಷ್ಮಿ ದೇವಿಗೆ ಬಣ್ಣ ಬಣ್ಣದ ಸೀರೆಗಳಿಂದ ಸಿಂಗರಿಸಿ, ಹೂವಿನ ಅಲಂಕಾರ ಮಾಡಿ ತಿಂಡಿಗಳ ನೈವೇದ್ಯ, ಹಣ್ಣುಗಳನ್ನು ಇರಿಸಿ ಪೂಜೆ ನೆರೆವೇರಿಸಿದರು.
ಮನೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಹೂವಿನಿಂದ ಮತ್ತು ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಮನೆಯ ಮುತ್ತೈದರು ಬಣ್ಣ ಬಣ್ಣದ ಸೀರೆಗಳನ್ನು ಧರಿಸಿ ಹೂವನ್ನು ಮುಡಿದು ಕೈತುಂಬ ಬಳೆಗಳನ್ನು ಧರಿಸಿ ತಾಯಿಗೆ ಪೂಜೆ ಸಲ್ಲಿಸಿದರು.
ಪ್ರತಿ ಮನೆಗಳಲ್ಲೂ ಕೂಡ ಪದಾರ್ಥಗಳ ಬೆಲೆ ಏರಿದರೂ ಕೂಡ ಯಾವುದಕ್ಕೂ ಕೊರತೆ ಬಾರದ ರೀತಿ ಪದಾರ್ಥಗಳನ್ನು ಖರೀದಿ ಮಾಡಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು