ವಾರಣಾಸಿ: ಇಂದು ಕಾಶಿ ಮಹಾನಗರದಲ್ಲಿ ಮಾಜಿ ಸಚಿವರಾದ ಎಸ್ ಎ ರಾಮದಾಸ್ ರವರು ಹನುಮಾನ್ ಘಾಟ್ ನಲ್ಲಿರುವ ಕನ್ನಡದ ಶ್ರೇಷ್ಠ ಕವಿ ವಿ ಸೀತಾರಾಮಾಯ್ಯನವರ ಮೊಮ್ಮಕ್ಕಳು ಅವರಿಗೆ ಮೈಸೂರಿನ ಸಂಪರ್ಕವನ್ನು ಹೊಂದಿರುವ ಮೈಸೂರು ವಿಶ್ವನಾಥ್ ಶರ್ಮ ಅವರ ಮಕ್ಕಳಾದ ಪ್ರಸನ್ನ ಕುಮಾರ್ ಶರ್ಮ, ಕೇದಾರನಾಥ ಶರ್ಮ ಅವರ ಮನೆಗೆ ಬಿಜೆಪಿ ತಂಡ ಭೇಟಿಕೊಟ್ಟು ವಿ.ಸಿತಾರಾಯ್ಯನವರ ಸಾಧನೆಗಳ ಬಗ್ಗೆ ಚರ್ಚೆ ಮಾಡಲಾಯಿತು.

ಸುಮಾರು 120 ವರ್ಷಕ್ಕೂ ಮೊದಲು ಕಾಶಿಯಲ್ಲಿ ಬಂದು ನೆಲೆಸಿ ವಿಶೇಷವಾಗಿ ಸಂಸ್ಕೃತ ವೇದ ಅಧ್ಯಯನವನ್ನು ಮಕ್ಕಳಿಗೆ ಮಾಡಿಸುವಂತಹ ದೊಡ್ಡ ಕಾರ್ಯದಲ್ಲಿ ತೊಡಗಿದ್ದ ಈ ಒಂದು ಕುಟುಂಬ 6 ತಲೆಮಾರುಗಳಿಂದ ಕಾಶಿಯಲ್ಲಿ ಇದ್ದು ವಿಶೇಷವಾಗಿ ಕನ್ನಡಿಗರೆಲ್ಲರಿಗೂ ಆಶ್ರಯ ಸ್ಥಳವಾಗಿದೆ.
ಇಂದಿಗೂ ವೇದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಅಪರೂಪದ ಕುಟುಂಬವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು ಸಂತೋಷದ ವಿಷಯವೆಂದರೆ ಕನ್ನಡದ ನಾಮಫಲಕವನ್ನು ಇವರ ಮನೆ ಮುಂದೆ ನೋಡಿದೆವು ಇವರ ಮನೆ ಪುರಾತನವಾಗಿದ್ದು ಮನೆಯ ಒಳಗಡೆ ಶಿವನ ಲಿಂಗದ ಸ್ಥಾಪನೆ ಮಾಡಿ ಪ್ರತಿನಿತ್ಯವೂ ಪರಮಾತ್ಮನ ಅಭಿಷೇಕ ಮತ್ತು ಪೂಜೆ ಕೈಂ ಕರ್ಯಗಳು ಮನೆ ಒಳಗಡೆ ನಡೆಯುತ್ತಿರುವುದು ನೋಡಿ ತುಂಬಾ ಆನಂದವಾಯಿತು.

ಈ ಮನೆಯ ಮೂಲಕವಾಗಿ ಅವರಿಗೆ ಸಂಪರ್ಕ ಇರುವವರನ್ನು ಮಾತನಾಡಿಸಿ ಅವರ ಮೂಲಕ ಮತಯಾಚನೆ ಮಾಡುವಂತ ಕಾರ್ಯವನ್ನು ಮಾಡಲಾಯಿತು. ನಂತರ ರಾತ್ರಿ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಮಹೇಶ್ ತೆಂಗಿನ ಕಾಯಿ ರವರು ಯಶ್ ಪಾಲ್ ಸುವರ್ಣ ರವರು ವಿಧಾನ ಪರಿಷತ್ ಸದಸ್ಯರಾದ ಕೇಶಪ್ರಸಾದ್ ರವರು ನವೀನ್ ರವರು ಹಾಗೂ ಬೂತಿನ ಜವಾಬ್ದಾರಿ ಹೊಂದಿರುವ ರಾಜೇಶ್ ರವರು ಹಾಜರಿದ್ದರು.