ವಾರಣಾಸಿ: ಇಂದು ವಾರಣಾಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಶಿ ಮಹಾನಗರದ ಹನುಮಾನ್ ಘಾಟ್ ಪ್ರದೇಶದಲ್ಲಿ ಕನ್ನಡಿಗರು ಇರುವ ಸುಮಾರು 50ಕ್ಕೂ ಮನೆಗಳಿಗೆ ತೆರಳಿ ಉಭಯ ಕುಶಲೌಪರಿಗಳನ್ನು ವಿಚಾರಿಸಿ ಮತಯಾಚನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಾಶಿಯ ವಿಶಾಲಾಕ್ಷಿಯ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಶ್ರೀನಿವಾಸ ಮೂರ್ತಿ ಹಾಗೂ ಆದಿತ್ಯ ಅವರ ಮನೆಗಳಿಗೆ ಭೇಟಿ ನೀಡಿದರು.
ಸ್ಥಳೀಯ ಬೂತಿನ ಅಧ್ಯಕ್ಷರಾದ ರಾಜೇಶ್ ರವರ ಜೊತೆ ಮಾಜಿ ಸಚಿವರಾದ ಎಸ್ ಎ ರಾಮದಾಸ, ಹುಬ್ಬಳ್ಳಿ ಶಾಸಕರಾದ ಮಹೇಶ್ ಟೆಂಗಿನ ಕಾಯಿ,ಉಡುಪಿ ಶಾಸಕರಾದ ಸುವರ್ಣ, ವಿಧಾನಪರಿಷತ್ ಸದಸ್ಯರುಗಳಾದ ಕೇಶವ್ ಪ್ರಸಾದ್, ನವೀನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿಶೇಷವಾಗಿ ಕಾಶಿಯಲ್ಲಿ ಬಹಳ ವರ್ಷಗಳಿಂದ ಇದ್ದ ವಿದ್ಯುತ್ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ರಸ್ತೆಗಳ ಸಮಸ್ಯೆಗಳನ್ನು ಪರಿಹರಿಸಿ ವಿಶಾಲವಾದ ರಸ್ತೆಗಳನ್ನು ಹಾಗೂ ಸುಮಾರು 12 ಗಂಟೆಗಳ ಕಾಲ ನೀರಿನ ವ್ಯವಸ್ಥೆ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಯನ್ನು ಮಾಡಿರುವುದರಿಂದ ಸ್ಥಳೀಯ ವ್ಯಾಪಾರ ಮತ್ತು ಜನರ ಉತ್ಪತ್ತಿಯಲ್ಲಿ ಬೆಳವಣಿಗೆಯಾಗಿದೆ ಎಂದು ಸ್ಥಳೀಯ ಜನರು ಮೆಚ್ಚುಗೆಯ ಮಾತುಗಳನ್ನು ಆಡಿದರು.
ಈ ಬಾರಿ 8 ಲಕ್ಷಕ್ಕೂ ಅಧಿಕ ಮತಗಳಿಂದ ನರೇಂದ್ರ ಮೋದಿಜಿ ರವರು ಗೆಲ್ಲುತ್ತಾರೆ ಎಂದು ತಿಳಿಸಿದರು.