Friday, April 18, 2025
Google search engine

Homeರಾಜ್ಯಸುದ್ದಿಜಾಲವರ್ಧಂತಿ ಮಹೋತ್ಸವ: ಬ್ರಾಹ್ಮಣರಿಗೆ ಯಜ್ಞೋಪವೀತ,ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ

ವರ್ಧಂತಿ ಮಹೋತ್ಸವ: ಬ್ರಾಹ್ಮಣರಿಗೆ ಯಜ್ಞೋಪವೀತ,ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ

ಚಾಮರಾಜನಗರ: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಸನ್ನಿಧಾನಂ ರವರ ವರ್ಧಂತಿ ಮಹೋತ್ಸವ ಅಂಗವಾಗಿ ಚಾಮರಾಜನಗರದ ಪಟ್ಟಾಭಿ ರಾಮಮಂದಿರದಲ್ಲಿ ನಡೆದ ವರ್ಧಂತಿ ಮಹೋತ್ಸವದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ದಿಂದ ನೆರೆದಿದ್ದ 50ಕ್ಕೂ ಹೆಚ್ಚು ಬ್ರಾಹ್ಮಣರಿಗೆ ಉಪಾಕರ್ಮಕ್ಕೆ ಯಜ್ಞೋಪವೀತ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶೃಂಗೇರಿ ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ ಮಾಡಲಾಯಿತು.‌
ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್.ಗಣೇಶ್ ರವರು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂ ಅವರು ತಿಳಿಸಿದಂತೆ ಬ್ರಾಹ್ಮಣರಿಗೆ ಸಂಧ್ಯಾವಂದನೆಯೇ ಅತ್ಯಂತ ಪ್ರಮುಖವಾದುದು ಹೇಳಿದ ಅನುಗ್ರಹ ಸಂದೇಶವನ್ನು ಸ್ವೀಕರಿಸಿ ಚಾಮರಾಜನಗರದ ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ಕೀರ್ತಿಶೇಷ ಗುಂಡಪ್ಪನವರ ಹೆಸರಿನಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಎಂದು ಸ್ಥಾಪಿಸಿ ಅದರ ಮೂಲಕ ಸಾಮಾಜಿಕ ಚಟುವಟಿಕೆ ಮಾಡಲು ಸಂಕಲ್ಪಿಸಿದೆ.

ಚಾಮರಾಜನಗರ, ಮೈಸೂರು ಹಾಗೂ ಚಾಮರಾಜನಗರದಲ್ಲಿ ಮುಂಬರುವ ಋಗುಪಾಕರ್ಮದ ಪ್ರಯುಕ್ತ ಬ್ರಾಹ್ಮಣರಿಗೆ ಯಜ್ಞೋಪವೀತ, ಶೃಂಗೇರಿ ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶಾರದಾ ಮಾತೆಯ ಭಾವಚಿತ್ರ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ನೀಡಲಾಗಿದೆ. ಪ್ರತಿಯೊಬ್ಬರು ಸಹ ಪ್ರತಿ ನಿತ್ಯ ಸಂಧ್ಯಾವಂದನೆ ಹಾಗೂ ಗಾಯತ್ರಿ ಜಪವನ್ನು ಮಾಡಬೇಕು. ಜಪ ತಪ ಧ್ಯಾನಗಳನ್ನು ಮಾಡುವುದರಿಂದ ಮನಸ್ಸನ್ನು ನಿಯಂತ್ರಣ ಮಾಡಬಹುದು. ಇಂದಿನ ಕಾಲದ ಔದ್ಯೋಗಿಕ ಹಾಗೂ ಸಾಮಾಜಿಕ ಒತ್ತಡಗಳಿಂದ ಸುಲಭವಾಗಿ ಹೊರಬರಲು ದೇಹ ಮತ್ತು ಮನಸ್ಸನ್ನು ಪ್ರಶಾಂತತೆ ಇಂದ ಇಡಲು ಸಂಧ್ಯಾವಂದನೆ ಅತ್ಯಂತ ಸಹಕಾರಿ.

ಮನೆಯ ಮಕ್ಕಳಿಗೆ ನಾವೇ ಮಾದರಿ ನಾವು ಎಷ್ಟು ಧರ್ಮ ನಿಷ್ಠರಾಗಿ ಇರುತ್ತೇವೋ ಅದನ್ನೇ ಮಕ್ಕಳು ಕಲಿಯುತ್ತಾರೆ , ನಾವು ಪೂಜೆ ಪುನಸ್ಕಾರ ಸಂಸ್ಕಾರ ಸಂಸ್ಕೃತಿ ಗಳನ್ನು ಮನೆಯಲ್ಲಿ ಮಕ್ಕಳು ಸಹ ಕಲಿಯುತ್ತಾರೆ ನಮ್ಮ ಸಂಸ್ಕಾರಗಳು ಅವಿಚ್ಛಿನ್ನವಾಗಿ ಮುಂದುವರೆಯುತ್ತದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳ ಪರಿಚಯವೇ ಇಲ್ಲದಂತಾಗುತ್ತದೆ. ಧರ್ಮೋ ರಕ್ಷತಿ ರಕ್ಷಿತಾಃ ಎಂದು ಶಾಸ್ತ್ರ ಹೇಳುತ್ತದೆ ಅಂತಹ ಧರ್ಮವನ್ನು ನಾವು ದಿನನಿತ್ಯದ ಜೀವನದಲ್ಲಿ ಕಾಪಾಡಿಕೊಂಡರೆ ಆ ಧರ್ಮವೇ ನಮ್ಮನ್ನು ಕಾಪಾಡುತ್ತದೆ.

ಇಲ್ಲಿ ಧರ್ಮವೆಂದರೆ ಉತ್ತಮ ಜೀವನ ಶೈಲಿ, ಉತ್ತಮವಾದ ಜೀವನ ಶೈಲಿ ರೂಢಿಸಿಕೊಂಡರೆ ಆ ಜೀವನ ಶೈಲಿಯೇ ನಮ್ಮನ್ನು ಕಾಪಾಡುತ್ತದೆ ಎಂಬುದೇ ಇದರ ಅರ್ಥ.‌ ಅಗತ್ಯ ಉಪಾಕರ್ಮ ಸಾಮಾಗ್ರಿಗಳನ್ನು ಒಳಗೊಂಡ ಈ ಕಿಟ್ ಅನ್ನು ಚಾಮರಾಜನಗರದ ರಾಮಮಂದಿರ ಹಾಗೂ ಬೆಂಗಳೂರಿನ ವಸುಂಧರಾ ಕೃಷ್ಣಾರ್ಷಯ ವಸತಿ ಸಂಕೀರ್ಣದ ಕೃಷ್ಣರತ್ನದಲ್ಲಿ ಹಾಗೂ ಮೈಸೂರಿನ ಆದರ್ಶ ಸೇವಾ ಸಂಘದ ಕಾರ್ಯಾಲಯದಲ್ಲಿ ಈಗಾಗಲೇ ವಿತರಿಸಲಾಗಿದೆ. ಉಪಾಕರ್ಮದ ಒಳಗೆ ಸುಮಾರು 500 ಕಿಟ್ ಗಳನ್ನು ವಿತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆಗಮಿಕರಾದ ಶ್ರೀ ನೀಲಕಂಠ ದೀಕ್ಷಿತರು ನಾವು ಬೆಳೆದ ಮೇಲೆ ಎಷ್ಟೊ ಸಣ್ಣ ವಿಚಾರಗಳನ್ನು ಮರೆಯುತ್ತೇವೆ ಯಾವುದು ಸಣ್ಣ ವಿಚಾರವೆಂದು ಪರಿಗಣಿಸಿ ನಿರ್ಲಕ್ಷ್ಯ ಮಾಡುತ್ತೇವೊ ಅದೇ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ ಪೂಜೆ, ಸಂಧ್ಯಾವಂದನೆ, ಧ್ಯಾನ ಹಾಗೂ ಜಪ ನಮ್ಮ ನಿತ್ಯ‌ ಕಾಯಕವಾಗಬೇಕು ಎಂದು ತಿಳಿಸಿದರು.
ಪಟ್ಟಾಭಿ ರಾಮಮಂದಿರ ಟ್ರಸ್ಟ್ ಅಧ್ಯಕ್ಷರಾದ ಕೆ. ಬಾಲಸುಬ್ರಹ್ಮಣ್ಯಂ ರವರು ಯುವಕರು ತಮ್ಮ ಶಿಕ್ಷಣ, ಹವ್ಯಾಸ, ಉದ್ಯೋಗದ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದು ಕೊಳ್ಳಬೇಕು. ಸನಾತಾನ ಸಂಸ್ಕೃತಿಯ ವಾರಸುದಾರರು ನೀವು ಯುವಕರು, ಧರ್ಮ, ಶಿಕ್ಷಣ,ಸಂಸ್ಕಾರ ವಿಚಾರಗಳನ್ನು ಜಗತ್ತಿಗೆ ತಿಳಿಸಲು ಚಾಮರಾಜನಗರದ ಪಟ್ಟಾಭಿ ರಾಮಮಂದಿರ ಯಾವಾಗಲೂ ಸಿದ್ದವಾಗಿರುತ್ತದೆ ಎಂದು ತಿಳಿಸಿದರು.
ಚಾಮರಾಜನಗರದ ಮುಖಂಡರಾದ ಶ್ರೀಯುತ ಲಕ್ಷ್ಮೀನರಸಿಂಹ ರವರು ಬ್ರಾಹ್ಮಣ ಸಮುದಾಯ ಇಂದು ಶಿಕ್ಷಣ, ಉದ್ಯೋಗದ ದೃಷ್ಟಿಯಿಂದ ವಲಸೆ ಹೋಗುತ್ತಿದ್ದಾರೆ ವಲಸೆ ಹೋದವರು ಮತ್ತೆ ಮರಳಿ ಬಂದು ಅವರಿಗೆ ಗ್ರಾಮ ಗಳಲ್ಲಿ ಅವರಿಗೆ ಇದ್ದ ಧಾರ್ಮಿಕ ಜವಾಬ್ದಾರಿ ಮುಂದುವರೆಸಲು ಆಗುತ್ತಿಲ್ಲ.

ಇದರಿಂದ ಸ್ಥಳೀಯವಾಗಿ ಧಾರ್ಮಿಕ ಚಟುವಟಿಕೆಗಳು ನೆಡೆಸಲು ಬೇರೆ ಊರುಗಳಿಂದ ಬರಬೇಕಾದ ಪರಿಸ್ಥಿತಿ ಇದೆ. ಯುವಕರು ಶಿಕ್ಷಣದೊಂದಿಗೆ ವೇದಾಧ್ಯಯನ, ಆಗಮ, ಜ್ಯೋತಿಷ್ಯ, ಶಾಸ್ತ್ರ, ಪುರಾಣ ಗಳ ವಿಚಾರಗಳನ್ನು ಸಹ ತಿಳಿಯಬೇಕು. ಇದರಿಂದ ಮುಂದಿನ ತಲೆಮಾರಿಗೆ ನಾವು ಸನಾತನ ಸಂಸ್ಕೃತಿಯನ್ನು ಉಳಿಸಬಹುದು ದಕ್ಷಿಣಾನ್ಮಯ ಶ್ರೀ ಶೃಂಗೇರಿ ಶಾರದಾ ಪೀಠ ನಮಗೆಲ್ಲ ಈ ವಿಚಾರದಲ್ಲಿ ಮಾದರಿ ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ಶ್ರೀಮತಿ ಇಂದಿರಮ್ಮ ಗುಂಡಪ್ಪ, ಕೆ.ಆರ್. ಗಣೇಶ್ , ಕೆ.ಆರ್.ರಂಗರಾಜು, ಕೆ‌.ಆರ್. ಕೃಷ್ಣ, ಕೆ.ಆರ್. ನಾಗರಾಜ್, ಕೆ.ಆರ್. ಮಂಜು, ಶ್ರೀಮತಿ ರಾಧಾ ಪ್ರೇಮ್ ಕುಮಾರ್, ವಿನಯ್ , ನಿರಂಜನ್.ನ್ ಕಾಶ್ಯಪ ಸಿಂಹ , ನಿರಂಜನ್ ಹಾಗೂ ಕೂಡ್ಲೂರು ಗುಂಡಪ್ಪ ರವರ ಕುಟುಂಬ ವರ್ಗ, ಪಟ್ಟಾಭಿ ರಾಮಮಂದಿರದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ ರವರು, ಭಾ.ಜ.ಪ ಮುಖಂಡರಾದ ಬಾಲಸುಬ್ರಹ್ಮಣ್ಯ, ಸೇವಾ ಭಾರತಿ ಯ ರಮೇಶ್ , ಬ್ರಾಹ್ಮಣ ಮುಖಂಡರಾದ ಶ್ರೀಯುತ ಲಕ್ಷ್ಮೀನರಸಿಂಹ ರವರು, ಚಾಮರಾಜನಗರದ ಯುವ ವೇದ ನಿಧಿ ಕಾರ್ತಿಕ್ ಭಾರದ್ವಾಜ್ , ಫಲಾಶ ಭಾರದ್ವಾಜ್ ಹಾಗೂ ಶಂಕರಾಚಾರ್ಯರ ಪೀಠದ ಅಪಾರ ಭಕ್ತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular