Sunday, April 20, 2025
Google search engine

Homeರಾಜ್ಯಸುದ್ದಿಜಾಲಮಹಿಳಾ ದಸರಾದಲ್ಲಿ ನಾನಾ ಸ್ಪರ್ಧೆ : ಸಂಭ್ರಮದಿಂದ ಪಾಲ್ಗೊಂಡ ಮಹಿಳೆಯರು

ಮಹಿಳಾ ದಸರಾದಲ್ಲಿ ನಾನಾ ಸ್ಪರ್ಧೆ : ಸಂಭ್ರಮದಿಂದ ಪಾಲ್ಗೊಂಡ ಮಹಿಳೆಯರು

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಇಂದು ನಗರದಲ್ಲಿ ನಡೆದ ಮಹಿಳಾ ದಸರಾದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ದಸರಾದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ನಗರದ ಚಾಮರಾಜೇಶ್ವರ ದೇವಾಲಯದ ಪಕ್ಕದ ರಥದ ಬೀದಿಯಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ವೈವಿಧ್ಯಮಯ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ರಂಗೋಲಿ ಬಿಡಿಸುವ ಮೂಲಕ ಸ್ಪರ್ಧಿಗಳಿಗೆ ಉತ್ತೇಜನ ನೀಡಿದರು.
ಬಳಿಕ ಮಹಿಳೆಯರು ಒಲೆ ರಹಿತವಾಗಿ ತಯಾರಿಸುವ ವಿವಿಧ ತಿನಿಸುಗಳ ಸ್ಪರ್ಧೆಗೆ ಜಿಲ್ಲಾಧಿಕಾರಿ ಅವರು ಚಾಲನೆ ನೀಡಿದರು. ಅಲ್ಲದೇ ತಯಾರಿಸಿದ ತಿನಿಸುಗಳನ್ನು ಸೇವಿಸಿ ರುಚಿ ನೋಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ದಸರೆ ಸಂಭ್ರಮಿಸುವ ಹಬ್ಬವಾಗಿದೆ. ಮಹಿಳೆಯರು ಉತ್ಸುಕ ಹಾಗೂ ಸಂತೋಷದಿಂದ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಅವರ ಅಭಿರುಚಿ ಆಸಕ್ತಿಗೆ ಅನುಗುಣವಾಗಿ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಹಿಳೆಯರು ಸಂತಸದಿಂದ ಭಾಗವಹಿಸಬೇಕು. ಮುಂದಿನ ಸಂದರ್ಭದಲ್ಲಿ ಮಹಿಳೆಯರಿಗಾಗಿಯೇ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದರು. ವಿಶೇಷಚೇತನರಿಗೆ ಬಕೆಟ್ ಮತ್ತು ಬಾಲ್ ಸ್ಪರ್ಧೆ ನಡೆಯಿತು. ಲೆಮನ್ ಇನ್ ದಿ ಸ್ಪೂನ್, ಮ್ಯೂಜಿಕಲ್ ಚೇರ್ ಮಡಕೆ ಒಡೆಯುವ ಸ್ಪರ್ಧೆಗಳು ಮಹಿಳೆಯರಿಗೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯ ಬಳಿಕ ಚಾಮರಾಜೇಶ್ವರ ದೇವಾಲಯದ ದಸರಾ ಪ್ರಧಾನ ವೇದಿಕೆಯಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅರಣ್ಯ ವಾಸಿಗಳ ನೃತ್ಯ ಗಮನ ಸೆಳೆಯಿತು. ಜನಪದ ಹಾಡುಗಳಿಗೆ ಮಹಿಳೆಯರು ಹೆಜ್ಜೆ ಹಾಕಿದರು. ಸಿನಿಮಾ ಹಾಡುಗಳಿಗೂ ನೃತ್ಯ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾ ಲಕ್ಷ್ಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

RELATED ARTICLES
- Advertisment -
Google search engine

Most Popular