Thursday, July 17, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ಕ್ಷೇತ್ರದಲ್ಲಿ 600 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ: ಶಾಸಕ ಡಿ....

ಕೆ.ಆರ್.ನಗರ ಕ್ಷೇತ್ರದಲ್ಲಿ 600 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ: ಶಾಸಕ ಡಿ. ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಎರಡು ವರ್ಷಗಳ ಅವಧಿಯಲ್ಲಿ ಕೆ.ಆರ್.ನಗರ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 600 ಕೋಟಿ ರೂಗಳ ಅನುಧಾನ ತಂದು ಈಗಾಗಲೇ ಕಾಮಗಾರಿಗಳನ್ನು‌ ಆರಂಭಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದ ಸಮೀಪ ಕಾವೇರಿ ನದಿಯಿಂದ ಬಳ್ಳೂರು ಅಣೆಕಟ್ಟೆಯ ಮೂಲಕ ಚಾಮರಾಜ ನಾಲೆಗಳಿಗೆ ನೀರು ಹರಿಸಲು ಅಣೆಕಟ್ಟೆಯ ಕ್ರಸ್ಟ್ ಗೇಟ್ ಗಳಿಗೆ ಪೂಜೆ ಸಲ್ಲಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಅನುಧಾನದಲ್ಲಿ ಹೆಚ್ಚಿನ ಪಾಲು 166 ಕೋಟಿ ನೀರಾವರಿ ಇಲಾಖೆಗೆ ಮತ್ತು 100 ಕೋಟಿಯಷ್ಟು ಸಣ್ಣ ನೀರಾವರಿ ಇಲಾಖೆಗೆ ನೀಡಲಾಗಿದ್ದು ಎಂದು ತಿಳಿಸಿದ ಅವರು ಹಾಡ್ಯ ಗ್ರಾಮಕ್ಕೆ 4 ಕೋಟಿ, ಕೊಳೂರು ಗ್ರಾಮಕ್ಕೆ 5 ಕೋಟಿ, ಹನಸೋಗೆ ಗ್ರಾಮಕ್ಕೆ 6 ಕೋಟಿ ವಿಶೇಷ ಅನುಧಾನ ನೀಡಿರುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಇರುವ ಚಾಮರಾಜ, ರಾಮಸಮುದ್ರ, ಕಟ್ಟೆಪುರ, ಹಾರಂಗಿ ಸೇರಿದಂತೆ ಎಲ್ಲಾನಾಲೆಗಳ ಕೊನೆಯ ಹಂತದ ವರಿಗೂ ತೂತುಗಳನ್ನು ಮತ್ತು ಏರಿಗಳನ್ನು ಸರಿ ಪಡಿಸಿ ಹೂಳು ಮತ್ತು ಗಿಡಗಂಟೆಗಳು
ಇದ್ದರೆ ತೆಗಿಸಿ ನೀರು ಸರಾಗ ಹರಿಸುವ ಮೂಲಕ ರೈತರ ಹಿತ ಕಾಯಲು ಈ ಎಲ್ಲಾ ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗ ಬೇಕು ರೈತರಿಂದ ದೂರು ಬಂದರೆ ತಾವು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರ ನೀಡಿದರು.

‌ಚುಂಚನಕಟ್ಟೆ ಶ್ರೀರಾಮ ಸಕ್ಕರೆಯ ನೊಂದಣಿಯ ಕಾರ್ಯ ಪೂರ್ಣಗೊಂಡಿದ್ದರು ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿದ್ದು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾರ್ಖಾನೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಕಬ್ಬು ಬೆಳೆಗಾರ ರೈತರು ಆತಂಕ ಪಡಬೇಡ ಎಂದರು.

ಇದೇ ಸಂದರ್ಭದಲ್ಲಿ ನೀರಾವರಿ ಇಲಾಖೆಯ ವತಿಯಿಂದ ಶಾಸಕ ಡಿ.ರವಿಶಂಕರ್ ಮತ್ತು ಸುನೀತಾ ರವಿಶಂಕರ್ ಅವರನ್ನು ಸನ್ಮಾಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ಎಂ.ಜೆ.ರಮೇಶ್, ವಕ್ತಾರ ಸಯದ್ ಜಾಬೀರ್, ಗ್ರಾ.ಪಂ.ಅಧ್ಯಕ್ಷೆ ಶೋಭಾ, ಸದಸ್ಯೆ ವಂದನಾ, ಕಾವ್ಯ ಬೀರೇಗೌಡ, ಗೌಡಯ್ಯ, ಮಹದೇವ, ನೂತನ್ ಗೌಡ, ಗೌರಮ್ಮ ರೈತ ಸಂಘಟನೆಗಳ ಅಂಕನಹಳ್ಳಿ ತಿಮ್ಮಪ್ಪ, ಚೀರನಹಳ್ಳಿ ಶ್ರೀನಿವಾಸ್, ನೇತ್ರಾವತಿ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಸಾದ್, ಸೊಸೈಟಿ ಅಧ್ಯಕ್ಷರಾದ ಶಿವಕುಮಾರ್, ಪಾಪಣ್ಣ, ಎಸ್ಸಿ ಕಾಂಗ್ರೇಸ್ ಘಟಕದ ಅಧ್ಯಕ್ಷ ಹೇಮಂತ್ಓಂ, ಕಾಂಗ್ರೇಸ್ ಮುಖಂಡರಾದ ಸರಿತಾಜವರಪ್ಪ, ಉಷಾಪ್ರಶನ್ನ, ಲತಾರವಿಶಂಕರ್, ರಾಣಿ,ಸುಮಾರಾಜೇಶ್, ಚೈತ್ರ, ಎಲ್.ಐ‌.ಸಿ.ಜಗದೀಶ್, ಬಡ್ಡೆ ಮಂಜಣ್ಣ, ಅಂಕನಹಳ್ಳಿ ಷಣ್ಮುಖ, ಯತೀಶ್, ಹಾಡ್ಯ ಮಹೇಶ್, ಮೀನ್ ರಂಗಸ್ವಾಮಿ, ಹಾಡ್ಯ ಶಿವನಂದ್, ತ್ರಿತಂಬಕಸ್ವಾಮಿ, ಜಲೇಂದ್ರ,ಇಇ ಕುಶುಕುಮಾರ್, ಎಎಇ ಆಯಾಜ್ ಪಾಷ, ಆದರ್ಶ್, ರಾಜೇಂದ್ರಕುಮಾರ್, ಇಂಜಿನಿಯರ್ ಗಳಾದ ಕಿರಣ್ ಕುಮಾರ್, ಕನ್ನಿಕಾ, ಉದಯ್, ಸಿಬ್ಬಂದಿಗಳಾದ ಪುಟ್ಟರಾಜನಾಯಕ್, ಸುಷ್ಮಿತಾ, ರವಿಕುಮಾರ್, ಆಪ್ತ ಸಹಾಯಕರಾದ ಮಹದೇವ್, ನವೀನ್, ಪುನೀತ್ ಇದ್ದರು.

RELATED ARTICLES
- Advertisment -
Google search engine

Most Popular