Saturday, April 19, 2025
Google search engine

Homeಸ್ಥಳೀಯನಾಳೆ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮ

ನಾಳೆ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮ

ಮಡಿಕೇರಿ: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ನಾಳೆ ಮಾ.೮ ರಂದು ಬೆಳಗ್ಗೆ ೯.೩೦ ಗಂಟೆಯಿಂದ ೧೨ ಗಂಟೆವರೆಗೆ ಸಾರ್ವಜನಿಕ ಭಕ್ತಾಧಿಗಳಿಗೆ ವಿಶೇಷ ಸೇವೆ ರುದ್ರಹೋಮ ಮತ್ತು ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ನಂತರ ವಿವಿಧ ಪೂಜೆ, ಅರ್ಚನೆಗಳು ನಡೆಯಲಿದೆ.

ಈ ದಿನದಂದು ದೇವಾಲಯವು ರಾತ್ರಿಪೂರ್ತಿ ತೆರೆದಿರುತ್ತದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಬಾಜನರಾಗುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. ೯೯೦೨೨೯೦೩೦೨, ೯೮೪೫೮೨೧೫೬೬ ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular