Friday, October 10, 2025
Google search engine

Homeರಾಜ್ಯಸುದ್ದಿಜಾಲಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಹಾಸನ : ಹಾಸನ ನಗರದ ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿAದ ಆಯೋಜಿಸಲಾಗುತ್ತಿದ್ದು, ಸದರಿ ಜಾತ್ರಾ ಮಹೋತ್ಸವಕ್ಕೆ ಬೇರೆ, ಬೇರೆ ರಾಜ್ಯ, ಜಿಲ್ಲೆಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಹಾಸನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆ, ಹಾಸನ ರವರ ಸಹಯೋಗದೊಂದಿಗೆ 2025 ನೇ ಸಾಲಿನ ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅ.10 ರಿಂದ ಅ.21 ರವರೆಗೆ ದೇವಸ್ಥಾನದ ಬಳಿ, ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಮತ್ತು ಸಿಲ್ವರ್ ಜುಬ್ಲಿ ಪಾರ್ಕ್ ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಲೈವ್ ಕರ್ನ್ಸ್ಟ್ (ದೇವಸ್ಥಾನದ ಬಳಿ, ಹಾಸನಾಂಬ ವೇದಿಕೆ) – ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರನ್ನು ಸ್ವಾಗತಿಸಲು ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಲು ಜಾನಪದ ಗೀತೆ, ಭಕ್ತಿ ಗೀತೆ, ಭಾವಗೀತೆ, ಮಂಟೇಸ್ವಾಮಿ, ಸಂತ ಶಿಶುನಾಳ ಶರೀಷರ ತತ್ವಪದಗಳು, ಕನಕದಾಸ, ಪುರಂದರದಾಸರ ಕೀರ್ತನೆಗಳು ಹೀಗೆ ಸಂಗೀತದ ಹಲವು ಪ್ರಾಕಾರಗಳನ್ನು ಈ ನಾಡಿನ ಪ್ರಸಿದ್ಧ ಗಾಯಕರು ಹಾಡಲಿದ್ದಾರೆ. ಸರತಿ ಸಾಲಿನಲ್ಲಿ ಬರುವ ಭಕ್ತಾದಿಗಳು ಈ ಲೈವ್ ಕಾರ್ಯಕ್ರಮವನ್ನು ಅ.10 ರಿಂದ ಅ.21 ರವರೆಗೆ ಬೆಳಗ್ಗೆ 10.30 ರಿಂದ ಮದ್ಯಾಹ್ನ 1.30 ರವರೆಗೆ ಮತ್ತು ಸಂಜೆ 8 ರಿಂದ 11 ರವರೆಗೆ ವೀಕ್ಷಿಸಬಹುದಾಗಿದೆ.

ಇದರೊಂದಿಗೆ ಪ್ರತಿದಿನ ಮುಂಜಾನೆ 5.30 ರಿಂದ 7.30ರ ವರೆಗೆ ಭಕ್ತಿಯ ಪರಾಕಾಷ್ಠೆ ಮೆರೆಯುವ ಭಜನೆಯೊಂದಿಗೆ ದಿನದ ಆರಂಭ ಮಾಡಲಾಗುತ್ತದೆ. ಬರುವ ಭಕ್ತಾಧಿಗಳು ಭಜನೆಯ ಕೀರ್ತನೆಗಳನ್ನು ಆಲಿಸಿ ಭಕ್ತಿಯ ಸಮರ್ಪಣೆಯೊಂದಿಗೆ ದೇವಿಯ ದರ್ಶನ ಮಾಡಬಹುದಾಗಿದೆ.

ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ, ಸಾಲಗಾಮೆ ರಸ್ತೆ (ಹೇಮಾವತಿ ವೇದಿಕೆ) – ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಕಾರ್ಯಕ್ರಮಗಳ ಮೂಲಕ ಭಕ್ತಾಧಿಗಳಿಗೆ ಅಭಿರುಚಿಗೊಳಿಸಲು ಜಾನಪದ ನೃತ್ಯ, ರಂಗಗೀತೆ, ಭಕ್ತಿಗೀತೆ, ಜಾನಪದ ಗೀತೆ, ನೃತ್ಯ ರೂಪಕ, ತತ್ವಪದ, ಗೀಗಿಪದ, ಸುಗಮಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ದಿನಾಂಕ: 10-10-2025 ರಿಂದ 21-10-2025ರ ಸಂಜೆ 7.30 ರಿಂದ 10.30ರ ವರೆಗೆ ಆಯೋಜಿಸಲಾಗಿದೆ.

ಸಿಲ್ವರ್ ಜುಲ್ಲಿ ಪಾರ್ಕ್(ಬಾಹುಬಲಿ ವೇದಿಕೆ) – ಯುವ ಕಲಾವಿದರಿಂದ ಯುವ ಜನತೆಗಾಗಿ ಹಾಗೂ ಬರುವ ಎಲ್ಲಾ ಭಕ್ತರಿಗಾಗಿ ವೈಭವಪೂರಿತ ವಿಶಿಷ್ಟ ಕಾರ್ಯಕ್ರಮವನ್ನು ದಿನಾಂಕ: 17-10-2025 ರಿಂದ 20-10-2025ರ ಸಂಜೆ 7 ರಿಂದ 09 ರ ವರೆಗೆ ಆಯೋಜಿಸಲಾಗಿದೆ. ಬರುವ ಭಕ್ತಾಧಿಗಳು ಭಿನ್ನಭಿನ್ನ ಫಲಪುಷ್ಟ ಪ್ರದರ್ಶನಗಳನ್ನು ನೋಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆನಂದಿಸಬಹುದಾಗಿದೆ.

ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿ, ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ – ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಸಂಬAಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಕಾಫಿ ಬೋರ್ಡ್ ಹಾಗೂ ಆರೋಗ್ಯ, ಕೈಗಾರಿಕೆ, ಕೆ.ಎಂ.ಎಫ್, ಎನ್.ಆರ್.ಎಲ್.ಎಂ, ಎನ್.ಯು.ಎಲ್.ಎಂ. ಒಳಗೊಂಡAತೆ ಇತರೆ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ದಿನಾಂಕ: 10-10-2025 ರಿಂದ 21-10-2025ರ ಬೆಳಗ್ಗೆ 9-00 ರಿಂದ ರಾತ್ರಿ 8-30ರವರೆಗೆ ಸಾರ್ವಜನಿಕರಿಗೆ / ಭಕ್ತಾದಿಗಳಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.

ದಿನಾಂಕ: 12-10-2025 ರಂದು ಬೆಳಗ್ಗೆ 10-00 ಗಂಟೆಗೆ ಪಾಕ ಸ್ಪರ್ದೆ ಏರ್ಪಡಿಸಿದ್ದು, ವಿಜೇತ ಮೊದಲ ಮೂರು ಸ್ಪರ್ದಿಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ ಹಾಗೂ ದಿನಾಂಕ: 19-10-2025 ರಂದು ಶ್ವಾನ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿರುತ್ತದೆ.

ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ -2025ರ ಅಂಗವಾಗಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು / ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಹಾಸನ ಈ ಮೂಲಕ ಕೋರಿದೆ.

RELATED ARTICLES
- Advertisment -
Google search engine

Most Popular