ಮೈಸೂರು: ಕೂರ್ಗಳ್ಳಿಯ ವಾಸವಿ ಕಾನ್ವೆಂಟ್ ಶಾಲೆಯಲ್ಲಿ ಸಮೃದ್ಧಿ ವಾರ್ತಾ ಪತ್ರಿಕೆ ಹಾಗೂ ಕೆಎಂಪಿಕೆ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ, ರಾಧೆ ವೇಷಧಾರಿಗಳಾಗಿ ಸಭಿಕರ ಗಮನ ಸೆಳೆದರು ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲಾ ಮಕ್ಕಳು ಕೃಷ್ಣ, ರಾಧೆ ವೇಷಭೂಷಣ ಧರಿಸಿ ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ವಿ ಅನಂತ್ ರಾಮ್
ಮಾತನಾಡಿ, ‘ಮಕ್ಕಳಿಗೆ ಸಂಪ್ರದಾಯ, ಸಂಸ್ಕೃತಿ ಕಲಿಸುವ ಕೆಲಸ ಶಾಲಾ ಕಾಲೇಜು ಮತ್ತು ಮನೆಗಳಲ್ಲಿಯೂ ಆಗಬೇಕಿದೆ’ ಆರೋಗ್ಯವಂತ ಮಕ್ಕಳಿದ್ದರೆ ಆರೋಗ್ಯವಂತ ದೇಶ ನಿರ್ಮಾಣ ಸಾಧ್ಯ. ಮಕ್ಕಳು ಉತ್ತಮ ವಿದ್ಯೆ–ಸಂಸ್ಕಾರ ಕಲಿಯಬೇಕೆಂದರೆ ಉತ್ತಮ ಶಿಕ್ಷಕರ ಅಗತ್ಯವಿದೆ’ ಎಂದರು.
ಇದೆ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ವಿ ಅನಂತರಾಮ್, ಮುಖ್ಯ ಶಿಕ್ಷಕರಾದ ಜಯರಾಮೇಗೌಡ, ಸಮೃದ್ಧಿ ವಾರ್ತಾಪತ್ರಿಕೆ ಸಂಪಾದಕರಾದ ಸಹನಾ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಧನಲಕ್ಷ್ಮಿ ರಾಮು, ಮುರಳಿಧರ್ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.