ಮೈಸೂರು: ಶಿವಾಜಿ ಮಹಾರಾಜರ ಪ್ರಭಾವಕ್ಕೆ ಒಳಗಾಗಿದ್ದ ವಾಸುದೇವ ಬಲವಂತ ಪಡಕೆ, ಭಾರತ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಕಾರಿ ನಾಯಕರು. ಯುವಕರಿಗೆ ಎಂದೆಂದೂ ಅಜರಾಮರ ಎಂದು ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಋಗ್ವೇದಿ ಯೂತ್ ಕ್ಲಬ್ ನ ಕಾರ್ತಿಕ್ ಜೋಶಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹೆಬ್ಬಾಳದಲ್ಲಿ ಹಮ್ಮಿಕೊಂಡಿದ್ದ ವಾಸುದೇವ ಬಲವಂತ ಫಡಕೆ ರವರ ಬಲಿದಾನ ದಿವಸದಲ್ಲಿ ಭಾವಚಿತ್ರಕ್ಕೆ ಪುಷ್ಪಾ ಅರ್ಪಿಸಿ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದರು.

ಬ್ರಿಟಿಷರ ಶೋಷಣೆ ಯ ವಿರುದ್ಧ ಸ್ವರಾಜ್ಯದ ಪರಿಕಲ್ಪನೆ ಯೊಂದಿಗೆ ತಮ್ಮದೇ ಆದ ಐಕ್ಯ ವರ್ಧನಿ ಸಭಾ ಸಂಘಟನೆಯ ಮೂಲಕ ಯುವಕರಲ್ಲಿ ಮತ್ತು ಜನತೆಯಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಜಾಗೃತಗೊಳಿಸಿ ಸೈನ್ಯ ಸಂಘಟಿಸಿದ ಮಹಾನ್ ವ್ಯಕ್ತಿ . ಕ್ರಾಂತಿಕಾರಿಗಳ ಹೋರಾಟ ನಿರಂತರವಾಗಿ ದೇಶದಲ್ಲಿ ರಾಷ್ಟ್ರೀಯ ಪರಿಕಲ್ಪನೆ, ಸ್ವಾತಂತ್ರ್ಯ ಚಳುವಳಿಯ ಚಿಂತನೆ ಹೆಚ್ಚಾಯಿತು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಮಹಾನ್ ಕ್ರಾಂತಿಕಾರಿ ನಾಯಕರು. ಬ್ರಿಟಿಷರ ಶೋಷಣೆಯ ವಿರುದ್ಧ, ರೈತರ ಕಷ್ಟಗಳು ಹಾಗೂ ಜನತೆಯ ಶೋಷಣೆಯ ವಿರುದ್ಧ ಮಹಾನ್ ಹೋರಾಟ ನಡೆಸಿ ತಮ್ಮದೇ ಸೈನ್ಯದ ಮೂಲಕ ಪುಣೆ ನಗರವನ್ನು ತಮ್ಮ ಹಿಡಿತದಲ್ಲಿ ಸಾಧಿಸಿದ ವ್ಯಕ್ತಿ ಎಂದರು.
ಕ್ರಾಂತಿಕಾರರ ಹೋರಾಟ ,ತ್ಯಾಗ ಬಲಿದಾನಗಳನ್ನು ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ತಿಳಿಸುವ ಕಾರ್ಯ ವಾಗಬೇಕು. ರಾಷ್ಟ್ರಕ್ಕಾಗಿ ತಮ್ಮ ಜೀವವನ್ನು ಅರ್ಪಿಸಿಕೊಂಡವರ ಇತಿಹಾಸ ತಿಳಿಸಬೇಕು. ರಾಷ್ಟ್ರ ಸಾವಿರಾರು ಕ್ರಾಂತಿಕಾರಿಗಳ ನಾಯಕರನ್ನು ಕಳೆದುಕೊಂಡಿದೆ. ಅವರ ಸೇವೆ, ಅರ್ಪನೆಯ ಮಹತ್ವವನ್ನು ಯುವ ಜನತೆಗೆ ತಿಳಿಸಬೇಕು. ರಾಷ್ಟ್ರದ ಅಭಿವೃದ್ಧಿ, ರಾಷ್ಟ್ರಕ್ಕಾಗಿ ಅರ್ಪಣೆ ಮಾಡಿಕೊಳ್ಳುವ ಮನೋಗುಣವನ್ನು ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಋಗ್ವೇದಿ, ಸುರೇಶ್, ವಿಜಯಲಕ್ಷ್ಮಿ, ಕುಸುಮ,, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಎಸ್ ಋಗ್ವೇದಿ ಉಪಸ್ಥಿತರಿದ್ದರು.