Wednesday, April 8, 2026
Google search engine

Homeಅಪರಾಧಕಾನೂನು42ನೇ ಎಸಿಜೆಎಂ ವಾರೆಂಟ್ ಮೇರೆಗೆ ವಾಟಾಳ್ ನಾಗರಾಜ್ ಬಂಧನ

42ನೇ ಎಸಿಜೆಎಂ ವಾರೆಂಟ್ ಮೇರೆಗೆ ವಾಟಾಳ್ ನಾಗರಾಜ್ ಬಂಧನ

ಬೆಂಗಳೂರು : 42ನೇ ಎಸಿಜೆಎಂ  ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರ ನಗರ ಠಾಣಾ ಪೊಲೀಸರು  ವಾಟಾಳ್​ ನಾಗರಾಜ್​ ಅವರನ್ನು ಬಂಧಿಸಿದ್ದಾರೆ. 2021 ರಲ್ಲಿ ವಾಟಾಳ್ ನಾಗರಾಜ್ ಅವರು  ಶಾಸಕ ಸುರೇಶ್ ಕುಮಾರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  42ನೇ ಎಸಿಜೆಎಂ ನ್ಯಾಯಾಲಯ  ವಾಟಾಳ್​ ನಾಗರಾಜ್​ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು.

ಬಂಧನದ ವೇಳೆ  ವಾಟಾಳ್​ ನಾಗರಾಜ್​ ಅವರು ಇಂಗ್ಲಿಷ್‌ ನಲ್ಲಿ ವಾರೆಂಟ್ ತಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕನ್ನಡದಲ್ಲಿ ವಾರೆಂಟ್ ಕೊಟ್ಟರೆ ಮಾತ್ರ ಬರುತ್ತೇನೆ ಇಲ್ಲದಿದ್ದರೆ ಬರುವುದಿಲ್ಲ ಎಂದು ಪಟ್ಟು ಹಿಡಿದು  ಪೊಲೀಸ್ ವಾಹನ ಹತ್ತಲು ನಿರಾಕರಿಸಿದರು. ಈ ವೇಳೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಆಟೋದಲ್ಲಿ ಕೋರ್ಟ್‌ಗೆ ಕರೆದುದೊಯ್ದರು.

RELATED ARTICLES
- Advertisment -
Google search engine

Most Popular