ಮಂಡ್ಯ: ರಾತ್ರಿ ಸುರಿದ ಧಾರಕಾರ ಮಳೆಗೆ ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದ ವಿಶ್ವೇಶ್ವರಯ್ಯ ನಾಲಾ ಸುರಂಗದಲ್ಲಿ ಭೂ ಕುಸಿತವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ಮಧ್ಯ ಭಾಗದಲ್ಲಿ ಸುರಂಗ ಹಾದು ಹೋಗಿದ್ದು, ಏಕಾಏಕಿ ನೂರು ಅಡಿ ಸುರಂಗ ಕುಸಿದಿದೆ.
ರಾಜಣ್ಣ ಎಂಬುವವರ ಮನೆಯ ಹಿಂದೆ ಇರುವ ಸುರಂಗ ಕುಸಿದಿದ್ದು, ಏಕಾಏಕಿ ಸುರಂಗ ಕುಸಿದ ಹಿನ್ನೆಲೆ ಮನೆ ಗೋಡೆ ಕುಸಿತವಾಗಿದೆ.

ಹುಲಿಕೆರೆ ಬಳಿಯಿಂದ ವಿ.ಸಿ ನಾಲೆಗೆ ನಿರ್ಮಿಸಿರುವ ಸುರಂಗ ಮಾರ್ಗವು ಏಷ್ಯಾದ ಮೊದಲ ಸುರಂಗ ಮಾರ್ಗವೆಂದೆ ಪ್ರಸಿದ್ಧಿಯಾಗಿದೆ.
ಮದ್ದೂರು ಮಳವಳ್ಳಿ ತಾಲೂಕಿಗೆ ಈ ಸುರಂಗ ಮಾರ್ಗದ ಮೂಲಕ ವಿಸಿ ನಾಲೆ ಹಾದು ಹೋಗಿದೆ.