Tuesday, April 8, 2025
Google search engine

Homeರಾಜ್ಯಸುದ್ದಿಜಾಲವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ 'ವೀರ ಕನ್ನಡಿಗ ಅವಾರ್ಡ್‌- 2024'

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ‘ವೀರ ಕನ್ನಡಿಗ ಅವಾರ್ಡ್‌- 2024’

ಜೀ ಕನ್ನಡ ನ್ಯೂಸ್‌ ವಾಹಿನಿ ಆರಂಭದಿಂದಲೂ ವಿವಿಧ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಕನ್ನಡಿಗರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಾ ಬಂದಿದೆ. ಅದೇ ರೀತಿ ಈ ಬಾರಿ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿ ಗುರುತಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ.

ಶಿಕ್ಷಣ, ಸಮಾಜ ಸೇವೆ, ಉದ್ಯಮ, ಕೃಷಿ, ಇಂಜಿನಿಯರಿಂಗ್‌, ಕನ್ನಡ ಪರ ಹೋರಾಟ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ, ಈ ಮೂಲಕ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ, ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿರುವ ಸಾಧಕರನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಿ ಮುಕುಟಕ್ಕೆ ಗರಿ ಮೂಡಿಸಲಾಗಿದೆ.

ಜುಲೈ 30ರಂದು ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 27 ಸಾಧಕರಿಗೆ ಜೀ ಕನ್ನಡ ನ್ಯೂಸ್‌ ವತಿಯಿಂದ ʻವೀರ ಕನ್ನಡಿಗ ಅವಾರ್ಡ್‌- 2024ʼ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಾದ ಶ್ರೀಮುರಳಿ, ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌, ನಟಿ ಮೇಘನಾ ರಾಜ್‌ ಭಾಗಿಯಾಗಿದ್ದರು.

ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಅವಾರ್ಡ್‌- 2024 ಸಾಧಕರು

  1. ಡಾ. ಅಶ್ವಿನಿ ಎಸ್‌ ಭೂಷಣ್‌, ಉದ್ಯಮಿ
  2. ತನ್ವೀರ್‌ ಪಾಷಾ, ಓಲಾ, ಊಬರ್‌ ಡ್ರೈವರ್‌ ಮಾಲೀಕರ ಸಂಘದ ಅಧ್ಯಕ್ಷರು
  3. ಡಾ.ತಲಕಾಡು ಚಿಕ್ಕರಂಗೇಗೌಡ, ಕನ್ನಡಪರ ಹೋರಾಟಗಾರರು
  4. ಜಯಸಿಂಹ ಕೆ.ಎನ್, ಪತ್ರಕರ್ತರು, ಚಿಂತಕರು
  5. ಸುರೇಶ್‌ ಕೆಎನ್‌ ಸಿ, ಸಮಾಜ ಸೇವಕರು
  6. ಅರುಣ್‌ ಕುಮಾರ್‌ ಡಿ.ಟಿ, ಸಮಾಜ ಸೇವಕರು
  7. ತಾಯ್ನಾಡು ರಾಘವೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಸ್ಥಾಪಕ ಅಧ್ಯಕ್ಷರು
  8. ಡಾ.ಎಸ್.ಪಿ.ದಯಾನಂದ್‌, ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟಿಸ್‌ ಎಂಡಿ
  9. ಹನುಮಯ್ಯ ಗುತ್ತೇದಾರ್‌, ಸಮಾಜ ಸೇವಕರು
  10. ಮಹಾಂತೇಶ್‌ ಛಲವಾದಿ, ಸಮಾಜ ಸೇವಕರು
  11. ದೀಪಾ ರಾಣಿ ಸೇಕರ್‌, ಸಂಸ್ಥಾಪಕರು ಟ್ರಸ್ಟ್‌ ಟ್ರಾನ್ಫ್ರ್ಮ್‌ ಲೈಪ್‌ ಪ್ರೋಗ್ರಾಂ
  12. ಕಲಾವತಿ ಕಂಬಳಿ, ಕೃಷಿ ವಿಜ್ಞಾನಿ
  13. ನಾಗಭೂಷಣ್‌, ನಿವೃತ್ತ ಇಂಜಿನಿಯರ್‌ SAIL
  14. ಜಯಪ್ರಕಾಶ್‌ ಸಾರಥಿ, ಯುವ ಮುಖಂಡರು, ಸಮಾಜ ಸೇವಕರು
  15. ನಾಗರಾಜ್‌ ಸಾಲಗೇರಿ, ಸಮಾಜ ಸೇವಕರು
  16. ಮಹೇಂದ್ರ ಸಿಂಗ್‌ ಕಾಳಪ್ಪ, ಸಮಾಜ ಸೇವಕರು
  17. ಅನಂತ್‌ ವಿಶ್ವ ಆಚಾರ್ಯ, ಮನಿ ಇಸ್‌ ಹ್ಯಾಪಿನೆಸ್‌ ಸಂಸ್ಥಾಪಕರು
  18. ಕೆ.ಎನ್ ಚಕ್ರಪಾಣಿ, ಸಮಾಜ ಸೇವಕರು
  19. ಸಿ.ಎಸ್.ವೇಣುಗೋಪಾಲ್‌, ಡಿಸೈನ್‌ ಹೈಟ್ಸ್‌ ಸಂಸ್ಥೆ ಮುಖ್ಯಸ್ಥರು
  20. ನಿರ್ಮಲಾ, ಪ್ಲೋಟಸ್‌ ಚಿಟ್ಸ್‌ ಎಂಡಿ
  21. ರಾಜುಗೌಡ, ಎಕೋ ಪ್ಲಾಂಟ್‌ ಎಲಿಲೇಟರ್‌ ಎಂಡ್‌ ಎಸ್ಕಿಲೇಟರ್ಸ್‌ ಸಂಸ್ಥೆ ಮುಖ್ಯಸ್ಥರು
  22. ಡಾ.ಅಬ್ದುಲ್‌ ಸುಬಾನ್‌, ಫಾಲ್ಕನ್‌ ಶಿಕ್ಷಣ ಸಂಸ್ಥೆ ಎಂಡಿ
  23. ಮಲ್ಲಿಕಾರ್ಜುನ್‌ ಸರವಾಡ, ಕನ್ನಡ ಪರ ಹೋರಾಟಗಾರರು
  24. ಭೂಪಾಲನ್‌ ಸುನೀಲ್‌, ಸಮಾಜ ಸೇವಕರು
  25. ಡಾ.ಎಚ್‌.ಎಸ್‌.ರಾಘವೇಂದ್ರ ರಾವ್‌, ಉದ್ಯಮಿ
  26. ರವಿ ಶೆಟ್ಟಿ ಬೈಂದೂರು, ಅಧ್ಯಕ್ಷರು, ಕರ್ನಾಟಕ ಕಾರ್ಮಿಕ ಪರಿಷತ್‌
  27. ವಾಟಾಳ್‌ ನಾಗರಾಜ್‌, ಮಾಜಿ ಶಾಸಕರು, ವಾಟಾಳ್‌ ಪಕ್ಷದ ಅಧ್ಯಕ್ಷರು
RELATED ARTICLES
- Advertisment -
Google search engine

Most Popular