Saturday, April 19, 2025
Google search engine

Homeಅಪರಾಧವೇಣೂರು ಪಟಾಕಿ ಗೋದಾಮು ಸ್ಫೋಟ ಪ್ರಕರಣ: ನಾಲ್ಕನೇ ಆರೋಪಿ ಬಂಧನ

ವೇಣೂರು ಪಟಾಕಿ ಗೋದಾಮು ಸ್ಫೋಟ ಪ್ರಕರಣ: ನಾಲ್ಕನೇ ಆರೋಪಿ ಬಂಧನ

ಮಂಗಳೂರು: ವೇಣೂರು ಪಟಾಕಿ ಗೋದಾಮು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಉತ್ತರ ದಿವಾನರ ಪಾಳ್ಯ ನಿವಾಸಿಯಾದ ಅನಿಲ್.ಎಂ ಡೇವಿಡ್ (49) ಬಂಧಿತ ಆರೋಪಿ.

ಆರೋಪಿ ಅನಿಲ್ ​ಹೆಚ್ಚಿನ ಪಟಾಕಿ ರಾಸಾಯನಿಕ ಸರಬರಾಜು ಮಾಡುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜ.28ರ ಸಂಜೆ 5.30 ಸುಮಾರಿಗೆ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟವಾಗಿತ್ತು. ಸ್ಪೋಟದ ಸದ್ದು ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಬಂದಾಗ ಅಲ್ಲಿ ಇಡೀ ಗೋಡಾನ್​ ಗೆ ಬೆಂಕಿ ಆವರಿಸಿತ್ತು. ಒಂಬತ್ತು ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು.

ಈ ಪೈಕಿ ಕೇರಳದ ವರ್ಗೀಸ್ (68), ಹಾಸನದ ಚೇತನ್(25) ಕೇರಳದ ಸ್ವಾಮಿ(60) ಮೃತಪಟ್ಟಿದ್ದರು. ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ ಮತ್ತು ಕೇಶವ ಕೇರಳ ಗೋಡೌನ್​​ನಲ್ಲಿ ಕೆಲಸ ನಿರ್ವಹಿಸುತ್ತಿವರು. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು.

ಕುಚ್ಚೋಡಿ ನಿವಾಸಿ ಬಂಧಿತ ಆರೋಪಿ ಬಶೀರ್ ಎಂಬುವರು 2011-12 ರಲ್ಲಿ ಸ್ಟೋಟಕ ತಯಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದ್ದರು.

RELATED ARTICLES
- Advertisment -
Google search engine

Most Popular