Monday, July 14, 2025
Google search engine

Homeಸಿನಿಮಾಹಿರಿಯ ನಟಿ ಬಿ.ಸರೋಜಾ ದೇವಿ ನಿಧನ

ಹಿರಿಯ ನಟಿ ಬಿ.ಸರೋಜಾ ದೇವಿ ನಿಧನ

ಬೆಂಗಳೂರು : ಬೆಂಗಳೂರು ನಿವಾಸದಲ್ಲಿ ಬಹು ಭಾಷಾ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು ನಿಧನರಾಗಿದ್ದಾರೆ. ಕನ್ನಡ ತಮಿಳು ತೆಲುಗು ಹಿಂದಿ ಚಿತ್ರಗಳಲ್ಲಿ ಬಿ ಸರೋಜಾದೇವಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

ಇಂದು ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಬಿ ಸರೋಜಾದೇವಿ ಸಾವನ್ನಪ್ಪಿದ್ದಾರೆ. ಸರೋಜಾದೇವಿಯವರು ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಅಭಿನಯ ಸರಸ್ವತಿಯಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ.ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್ ಸೇರಿದಂತೆ ಅನೇಕ ಹಿರಿಯ ನಟರೊಂದಿಗೆ ಬಿ ಸರೋಜಾ ದೇವಿ ಅದ್ಭುತವಾಗಿ ನಟಿಸಿದ್ದರು.ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬಹುದೊಡ್ಡ ನಷ್ಟ ಉಂಟಾಗಿದೆ.

ಹೀಗಿವೆ ನಟಿ ಬಿ.ಸರೋಜಾದೇವಿ ಅವರು ನಟಿಸಿರುವ ಸಿನಿಮಾಗಳು

  • ಕಿತ್ತೂರುರಾಣಿ ಚೆನ್ನಮ್ಮ,
  • ಅಮರಶಿಲ್ಪಿ ಜಕಣಾಚಾರಿ,
  • ಕಥಾಸಾಗರ,
  • ಬಬ್ರುವಾಹನ,
  • ಭಾಗ್ಯವಂತರು,
  • ಆಷಾಡಭೂತಿ,
  • ಶ್ರೀರಾಮಪೂಜಾ,
  • ಕಚ ದೇವಯಾನಿ,
  • ರತ್ನಗಿರಿ ರಹಸ್ಯ,
  • ಕೋಕಿಲವಾಣಿ,
  • ಸ್ಕೂಲ್ಮಾಸ್ಟರ್,
  • ಪಂಚರತ್ನ,
  • ಲಕ್ಷ್ಮೀಸರಸ್ವತಿ,
  • ಚಿಂತಾಮಣಿ,
  • ಭೂಕೈಲಾಸ,
  • ಅಣ್ಣತಂಗಿ,
  • ಜಗಜ್ಯೋತಿ ಬಸವೇಶ್ವರ,
  • ಕಿತ್ತೂರುಚೆನ್ನಮ್ಮ,
  • ದೇವಸುಂದರಿ,
  • ವಿಜಯನಗರದ ವೀರಪುತ್ರ,
  • ಮಲ್ಲಮ್ಮನ ಪವಾಡ,
  • ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,
  • ಪೂರ್ಣಿಮಾ,
  • ಗೃಹಿಣಿ,
  • ಪಾಪಪುಣ್ಯ,
  • ಸಹಧರ್ಮಿಣಿ,
  • ಶ್ರೀನಿವಾಸಕಲ್ಯಾಣ,
  • ಚಾಮುಂಡೇಶ್ವರಿ ಮಹಿಮೆ,
  • ಚಿರಂಜೀವಿ,
  • ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.

ಪ್ರಶಸ್ತಿಗಳು

  • ೨೦೦೯ – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಚಿತ್ರಕ್ಕೆ ಜೀವಮಾನ ಸಾಧನೆ ಪ್ರಶಸ್ತಿ
  • ೨೦೦೯ – ಕರ್ನಾಟಕ ಸರ್ಕಾರದಿಂದ ಡಾ.ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
  • ೨೦೦೯ – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
  • ೨೦೦೧ – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
  • ೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
  • ೧೯೮೮ – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
  • ೧೯೮೦ – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
  • ೧೯೬೯ – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
  • ೧೯೬೫ – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ
RELATED ARTICLES
- Advertisment -
Google search engine

Most Popular