ಕೊಚ್ಚಿ : ಮಲಯಾಳಂನ ಖ್ಯಾತ ನಟ ಟಿ ಪಿ ಮಾಧವನ್(೮೮) ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಮಾಧವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿಧನರಾಗಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಪಠಾಣಪುರಂನ ಗಾಂಧಿ ಭವನದಲ್ಲಿ ವಾಸವಾಗಿದ್ದರು. ೪೦ ವರ್ಷ ವಯಸ್ಸಿನ ನಂತರ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ ಮಾಧವನ್ ೬೦೦ ಕ್ಕೂ ಹೆಚ್ಚು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಮಲಯಾಳಂ ಚಲನಚಿತ್ರ ನಟರ ಸಂಘದ ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಟಿಪಿ ಮಾಧವನ್ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಮಾಧವನ್ ಅವರು ೬೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಪ್ರತಿಭಾವಂತ ನಟ ಎಂದು ಹೇಳಿದರು. ಪಠಾಣಪುರಂನ ಗಾಂಧಿ ಭವನದಲ್ಲಿ ಕೊನೆಯ ವರ್ಷಗಳಲ್ಲಿ ಮಾಧವನ್ ಅವರು ದೂರದರ್ಶನ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರೆಸಿದರು ಎಂದು ಮುಖ್ಯಮಂತ್ರಿ ಸ್ಮರಿಸಿದರು.
ಟಿ.ಪಿ.ಮಾಧವನ್ ಅವರು ತಮ್ಮ ಅಂತಿಮ ದಿನಗಳನ್ನು ಪಠಾಣಪುರಂನ ಗಾಂಧಿ ಭವನದಲ್ಲಿ ಕಳೆದರು. ಚಿತ್ರರಂಗಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳಿಗಾಗಿ ಅವರಿಗೆ ರಾಮು ಕಾರ್ಯತ್ ಪ್ರಶಸ್ತಿ ಮತ್ತು ಪ್ರೇಮ್ ನಜೀರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ತಮ್ಮ ಮಗಳು, ದೇವಿಕಾ ಮತ್ತು ಮಗ ರಾಜಾ ಕೃಷ್ಣ ಮೆನ್ ಅವರನ್ನು ಅಗಲಿದ್ದಾರೆ.