Monday, April 21, 2025
Google search engine

Homeರಾಜ್ಯಹಿರಿಯ ರಂಗಕರ್ಮಿ ಜಯದೇವರಾವ್‌ಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ

ಹಿರಿಯ ರಂಗಕರ್ಮಿ ಜಯದೇವರಾವ್‌ಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ

ಬಳ್ಳಾರಿ : ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಿರಿಯ ರಂಗಕರ್ಮಿ, ಶಿಕ್ಷಕ, ಬಹುಭಾಷಾ ಕಲಾವಿದ ಜಯದೇವರಾವ್ ಕೆ.ಆರ್., ಅವರಿಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ಲಭಿಸಿದೆ.

ಬಳ್ಳಾರಿಯ ಶ್ರೀ ಮಹಾದೇವ ಎಜುಕೇಷನ್ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ಈ ಪ್ರಶಸ್ತಿ ಪ್ರಕಟಿಸಿದ್ದು, ಶಿಕ್ಷಕರೂ ಆಗಿರುವ ಜಯದೇವರಾವ್ ಅವರ ರಂಗಭೂಮಿ ಮತ್ತು ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಬಸವರಾಜ್ ಬಿಸಲಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕರ್ನಾಟಕ ಸಾಧಕ ರತ್ನ’ ಪ್ರಶಸ್ತಿಯ ಮೂಲಕ ಗೌರವ ದೊರಕಿರುವುದು ನಮಗೆ ಅಪಾರ ಸಂತಸ ತಂದಿದೆ. ಇದು ನಿಮ್ಮ ಶ್ರಮ ಮತ್ತು ಸಮರ್ಪಣೆಯ ಸ್ಮರಣೀಯ ಮೆಟ್ಟಿಲಾಗಿದೆ. ನಿಮ್ಮ ಈ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸುತ್ತೇವೆ. ಈ ಅಪರೂಪದ ಗೌರವಕ್ಕೆ ತಮಗೆ ನಮ್ಮ ಸಂಸ್ಥೆಗಳ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮನ್ನು ಆಯ್ಕೆ ಮಾಡಿದ ಸಮಿತಿಯವರಿಗೂ ಧನ್ಯವಾದಗಳು ಎಂದು ಬಸವರಾಜ ಬಿಸಿಲಹಳ್ಳಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

‘ಕರ್ನಾಟಕ ಸಾಧಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ ೧ ರಂದು ಭಾನುವಾರ, ಬೆಳಿಗ್ಗೆ ೧೦.೩೦ಕ್ಕೆ, ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡರ ರಂಗಮoದಿರದಲ್ಲಿ ಜರುಗಲಿದೆ.

RELATED ARTICLES
- Advertisment -
Google search engine

Most Popular