Sunday, April 20, 2025
Google search engine

HomeUncategorizedರಾಷ್ಟ್ರೀಯರಾಮ ಮಂದಿರ ಉದ್ಘಾಟನೆಗೆ ಎಲ್‌.ಕೆ.ಆಡ್ವಾಣಿ, ಜೋಶಿ ಅವರನ್ನು ಆಹ್ವಾನಿಸಿದ ವಿಎಚ್‌ ಪಿ

ರಾಮ ಮಂದಿರ ಉದ್ಘಾಟನೆಗೆ ಎಲ್‌.ಕೆ.ಆಡ್ವಾಣಿ, ಜೋಶಿ ಅವರನ್ನು ಆಹ್ವಾನಿಸಿದ ವಿಎಚ್‌ ಪಿ

ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯ ಕರಾದ ಎಲ್‌.ಕೆ.ಆಡ್ವಾಣಿ ಹಾಗೂ ಮುರಳಿ ಮನೋಹರ್‌ ಜೋಶಿ ಅವರನ್ನು ವಿಶ್ವ ಹಿಂದೂ ಪರಿಷತ್‌ ಮಂಗಳವಾರ ಭೇಟಿಯಾಗಿ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಿದೆ.

ವಿಎಚ್‌ ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದು, ರಾಮ ಮಂದಿರ ಚಳವಳಿಯ ನೇತಾರರಾದ ಅಡ್ವಾಣಿ ಹಾಗೂ ಜೋಶಿ ಇಬ್ಬರನ್ನೂ ಭೇಟಿಯಾಗಿ, ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ. ಇಬ್ಬರೂ ಹಿರಿಯರು ಬರುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಮಂದಿರ ಚಳವಳಿ ಕುರಿತಂತೆ ಅವರೊಂದಿಗೆ ಚರ್ಚೆ ನಡೆಸಿದೆವು ಎಂದು ತಿಳಿಸಿದ್ದಾರೆ.

ಅಡ್ವಾಣಿ ಹಾಗೂ ಜೋಷಿಯವರು ಹಿರಿಯರಾಗಿದ್ದು, ಅನಾರೋಗ್ಯವಿರುವ ಕಾರಣ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರದಂತೆ ಮನವಿ ಮಾಡಲಾಗಿದ್ದು, ಅದಕ್ಕೆ ಅವರು ಒಪ್ಪಿದ್ದಾರೆ ಎಂದು ಮಂದಿರ ಟ್ರಸ್ಟ್‌ ನ ಚಂಪತ್‌ ರಾಯ್‌ ನೀಡಿದ್ದ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಟ್ರಸ್ಟ್‌ ನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು ಈ ಇಬ್ಬರೂ ನಾಯಕರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಗ್ಯ ದೃಷ್ಟಿಯಿಂದ ಸಮಾರಂಭಕ್ಕೆ ಆಗಮಿಸದಂತೆ ವಿನಂತಿ ಮಾಡಿದ್ದೇವೆ ಎಂದು ತಿಳಿಸಿದ್ದರು.

RELATED ARTICLES
- Advertisment -
Google search engine

Most Popular