Friday, April 18, 2025
Google search engine

Homeರಾಜ್ಯವಿಧಾನ ಪರಿಷತ್ ಉಪ ಚುನಾವಣೆ: ಜಯ ಸಾಧಿಸಿದ ಕಾಂಗ್ರೆಸ್​ ಅಭ್ಯರ್ಥಿ; ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದ...

ವಿಧಾನ ಪರಿಷತ್ ಉಪ ಚುನಾವಣೆ: ಜಯ ಸಾಧಿಸಿದ ಕಾಂಗ್ರೆಸ್​ ಅಭ್ಯರ್ಥಿ; ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದ ಡಿಕೆಶಿ

ಬೆಂಗಳೂರು: ವಿಧಾನ ಪರಿಷತ್​ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಯಲ್ಲಿ ಕಾಂಗ್ರೆಸ್​ನ ಪುಟ್ಟಣ್ಣ ಭರ್ಜರಿ ಜಯಗಳಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ‘ಇಂದು ಕರ್ನಾಟಕ ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ದಿನ. ಬಿಜೆಪಿ, ಜೆಡಿಎಸ್​ನವರು ಒಟ್ಟಾಗಿ ಒಬ್ಬ ಅಭ್ಯರ್ಥಿ ಮಾಡಿ ಓರ್ವನನ್ನ ಕಣಕ್ಕಿಳಿಸಿದ್ದರು. ಆದರೆ, ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಪರಿಷತ್​ ಉಪ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯಕ್ಕೆ ದಿಕ್ಸೂಚಿಯಾಗಿದೆ ಎಂದರು.

ಇನ್ನು ಪುಟ್ಟಣ್ಣ ಅವರು ಈ ಹಿಂದೆ ಬಿಜೆಪಿಯಿಂದ ಗೆದ್ದಿದ್ದರು. ಈ ಬಾರಿ ವಿಧಾನಸಭೆಗೆ ಪ್ರವೇಶ ಮಾಡಲು ಪುಟ್ಟಣ್ಣ ಅವರನ್ನು ಕಣಕ್ಕಿಳಿಸಿದ್ದೆವು. ಶಿಕ್ಷಕರು ಬಹಳ ವಿದ್ಯಾವಂತರಿದ್ದಾರೆ, ನಮ್ಮ‌ ಪುಟ್ಟಣ್ಣ ಅವರನ್ನ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೆನೆ. ಇನ್ನು ಈ ಬಾರಿ ಗೆಲ್ಲುವ ಮೂಲಕ ಪುಟ್ಟಣ್ಣ ಅವರು ಐದನೇ ಬಾರಿ ಆಯ್ಕೆಯಾಗಿದ್ದಾರೆ. ಅವರು ಶಿಕ್ಷಕರ ಧ್ವನಿಯಾಗಿ ಕೆಲಸ‌ ಮಾಡಿದ್ದಾರೆ.

ಬೆಳಗಾವಿಯಲ್ಲಿ ಹುಕ್ಕೇರಿ ಅವರು ಗೆದ್ದು ದಾಖಲೆ ಮಾಡಿದರು. ಮಂಡ್ಯ, ಮೈಸೂರಿನಲ್ಲಿ ಮಧು, ಮಾದೇಗೌಡ ಗೆದ್ದಿದ್ದಾರೆ. ಇತ್ತ ಗುಲ್ಬರ್ಗದಲ್ಲಿ ಚಂದ್ರಶೇಖರ್ ಪಾಟೀಲ್ ಗೆದ್ದಿದ್ರು, ವಿದ್ಯಾವಂತ ಮತದಾರರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಪುಟ್ಟಣ್ಣ ಅವರು ಶಿಕ್ಷಕರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಯುವನಿಧಿ ಕಾರ್ಯಕ್ರಮ ಮಾಡಿದ್ದೇವೆ‌. ಅದನ್ನು ಮುಂದುವರೆಸಿಕೊಂಡು ಹೋಗುತ್ತೀವಿ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಕೂಡ ಸಭೆಯನ್ನು ಮಾಡಿದ್ದೆವು. ಅವರನ್ನ ಜನ ತಿರಸ್ಕರಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular