ಸದಸ್ಯರ ಹಿತ ಕಾಪಾಡಲು ಹಾಗೂ ಸಂಘದ ಅಭಿವೃದ್ಧಿಗಾಗಿ ಗೆಲ್ಲಿಸುವಂತೆ ಸುರೇಶ್ ಮನವಿ
ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಫೆ.9 ರಂದು ಚುನಾವಣೆ ನಡೆಯುತ್ತಿದ್ದು ಮುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಸುರೇಶ್ ಅವರು ತಮ್ಮ ಮತ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡು ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು.
ಈ ವೇಳೆ ಸುರೇಶ್ ಅವರು ಮಾತನಾಡಿ ಸಹಕಾರ ಕ್ಷೇತ್ರದ ಸದಸ್ಯರ ಹಿತ ಕಾಪಾಡಿ ಸಂಘದ ಅಭಿವೃದ್ಧಿ ಹಿತದೃಷ್ಟಿಯಿಂದ ನನ್ನ ಆಟೋ ಗುರುತಿಗೆ ಮತದಾರರು ಮತ ನೀಡಿ ಗೆಲ್ಲಿಸಿ ತಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಕೋರಿದರು.
ಮುಖಂಡರಾದ ಮಣಿಯಯ್ಯ ಅವರು ಮಾತನಾಡಿ ಈ ಬಾರಿ ಚುನಾವಣೆಯಲ್ಲಿ ಮುತ್ತೂರು ಕ್ಷೇತ್ರ ಮತದಾರರು ಸುರೇಶ್ ಅವರನ್ನು ಗೆಲ್ಲಿಸಿ ತಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಗ್ರಾಮದ ಮುಖಂಡರು ಹಾಗೂ ಸುರೇಶ್ ಬೆಂಬಲಿಗರು ಇದ್ದರು.