ಮೇಲೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವಿಜಯ ರಾಮಕೃಷ್ಣೇಗೌಡ, ಉಪಾಧ್ಯಕ್ಷರಾಗಿ ನೀಲಾವತಿ ನಿಂಗರಾಜನಾಯಕ ಆಯ್ಕೆ
ಹೊಸೂರು : ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ವಿಜಯ ರಾಮಕೃಷ್ಣೇಗೌಡ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಭಾರತಿ ವಿಶ್ವನಾಥ್ ಹಾಗೂ ವಿಜಯ ರಾಮಕೃಷ್ಣೇಗೌಡ ನಾಮಪತ್ರಗಳನ್ನು ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ವಿಜಯ ರಾಮಕೃಷ್ಣೇಗೌಡ 9 ಮತಗಳನ್ನು ಪಡೆದು ಆಯ್ಕೆಯಾದರೆ ಇವರ ಪ್ರತಿಸ್ಪರ್ಧಿ ಭಾರತಿ ವಿಶ್ವನಾಥ್ ಆರು ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ನೀಲಾವತಿ ನಿಂಗರಾಜನಾಯಕ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಕಾರ್ಯನಿರ್ವಹಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಮಧುಕುಮಾರ್, ಭಾರತಿ ವಿಶ್ವನಾಥ್, ಗವಿರಂಗೇಗೌಡ, ದೀಪಿಕಾರಘು, ಕುಮಾರ್, ನೀಲಾವತಿ ನಿಂಗರಾಜನಾಯಕ, ಎಂ.ಜೆ.ನರೇಂದ್ರಕುಮಾರ್, ಮಹದೇವಮ್ಮ ಸ್ವಾಮಿಶೆಟ್ಟಿ, ಕೆ.ವಿ.ಕುಮಾರ್, ವಿಜಯ ರಾಮಕೃಷ್ಣೇಗೌಡ, ಪುಟ್ಟಸ್ವಾಮಿಗೌಡ, ಪ್ರೇಮನಾಗೇಶ್, ಪವಿತ್ರ ಪ್ರಭಾಕರ್, ವೆಂಕಟೇಶ್, ಹೇಮಲತಾನಾಗೇಶ್, ಪಿಡಿಓ ಸ್ವಾಮಿನಾಯಕ, ಕಾರ್ಯದರ್ಶಿ ಚಲುವೇಗೌಡ, ಡಿಇಓ ಪ್ರಸನ್ನ ಪಾಲ್ಗೊಂಡಿದ್ದರು.
ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಗ್ರಾ.ಪಂ. ಸದಸ್ಯರುಗಳು, ಮುಖಂಡರುಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾದೇಗೌಡ, ಪಟೇಲ್ ಹರೀಶ್, ಪುನೀತ್, ಲೋಕೇಶ್, ಪುಟ್ಟೇಗೌಡ, ಮಂಜುನಾಥ, ಅಭಿ, ವಿಶ್ವನಾಥ, ಹರೀಶ್, ವೆಂಕಟೇಶ್, ಜವರಪ್ಪ, ಅನಿತ್, ಸ್ವಾಮಿ, ಶಿವಕುಮಾರ್, ರಾಜೇಗೌಡ, ವರದಶೆಟ್ಟಿ, ರಂಗೇಗೌಡ ಸೇರಿದಂತೆ ಹಲವರು ಇದ್ದರು.