Friday, April 4, 2025
Google search engine

Homeರಾಜ್ಯಸುದ್ದಿಜಾಲವಿಜಯಪುರ: ದಾಖಲೆ ಪ್ರಮಾಣದ ಮೊತ್ತಕ್ಕೆ ಎತ್ತು ಮಾರಾಟ

ವಿಜಯಪುರ: ದಾಖಲೆ ಪ್ರಮಾಣದ ಮೊತ್ತಕ್ಕೆ ಎತ್ತು ಮಾರಾಟ

ವಿಜಯಪುರ: ದಾಖಲೆ ಪ್ರಮಾಣದ ಮೊತ್ತಕ್ಕೆ ಎತ್ತು ಮಾರಾಟವಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಒಂದೇ ಎತ್ತು 18 ಲಕ್ಷ 1 ಸಾವಿರ ರೂ.ಗೆ ಮಾರಾಟವಾಗಿದೆ.

ಜಾನುವಾರು ಮಾರಾಟದ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಇದಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬವರ ಎತ್ತು ಈ ದಾಖಲೆ ಬರೆದಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಎಂಬವರು ಈ ಎತ್ತನ್ನು ಖರೀದಿಸಿದ್ದಾರೆ. ಎಲ್ಲರೂ ಹುಬ್ಬೇರಿಸೋ ಮೊತ್ತಕ್ಕೆ ಎತ್ತು ಮಾರಾಟವಾಗಿದ್ದು, ತೆರ ಬಂಡಿ ಎಳೆಯುವುದರಲ್ಲಿ ಈ ಎತ್ತು ಪ್ರಸಿದ್ಧಿಯಾಗಿತ್ತು.

ಉತ್ತರ ಕರ್ನಾಟಕ ಭಾಗದಲ್ಲಿ ತೆರಬಂಡಿ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಈ ಎತ್ತು ತಂದುಕೊಟ್ಟಿದೆ. ಹಿಂದೂಸ್ಥಾನ ಹೆಚ್‌ಪಿ ಎಂಬ ಹೆಸರಿನಿಂದ ಮಾಲೀಕರು ಈ ಎತ್ತನ್ನು ಕರೆಯುತ್ತಿದ್ದರು. ಇಲ್ಲಿವರೆಗೆ ಈ ಎತ್ತು 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಗೆದ್ದುಕೊಟ್ಟಿದೆ.

RELATED ARTICLES
- Advertisment -
Google search engine

Most Popular