ವಿಜಯಪುರ: ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ನವ ವಿವಾಹಿತರು ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಘಟನೆ.
ಹೊನಮಲ್ಲ ತೆರದಾಳ (31), ಅವರ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಸಾವು.
ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಹೊನಮಲ್ಲ ಜೊತೆ ಕಳೆದ ಮೇ 22 ರಂದು ಗಾಯತ್ರಿ ವಿವಾಹವಾಗಿತ್ತು.
ಮದುವೆಯಾಗಿ 24 ದಿನಗಳಲ್ಲಿ ಜೋಡಿ ಸಾವನ್ನಪ್ಪಿರುವುದು ಕುಟುಂಬವನ್ನು ನೋವಿಗೀಡು ಮಾಡಿದೆ.
ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ.
ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.