Monday, April 21, 2025
Google search engine

Homeಸ್ಥಳೀಯಗ್ರಾಮ ಸಹಾಯಕರುಗಳು ಒಗ್ಗಟ್ಟಿನಿಂದ ಸಾಮಾಜಿಕ ಸೇವಾ ಕಾರ್ಯ ಮಾಡಿ: ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ

ಗ್ರಾಮ ಸಹಾಯಕರುಗಳು ಒಗ್ಗಟ್ಟಿನಿಂದ ಸಾಮಾಜಿಕ ಸೇವಾ ಕಾರ್ಯ ಮಾಡಿ: ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ :  ಗ್ರಾಮ ಸಹಾಯಕರುಗಳು ಒಗ್ಗಟ್ಟಿನಿಂದ ತೊಡಗಿಸಿಕೊಂಡು ಸಂಘಟನೆಯ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವಂತೆ ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ ಹೇಳಿದರು.

ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಯಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರುಗಳ ತಾಲೂಕು ಘಟಕದ ವತಿಯಿಂದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಗ್ರಾಮ ಸಹಾಯಕರುಗಳು ತಮ್ಮ ಕರ್ತವ್ಯದ ಸಮಯದಲ್ಲಿ ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಅವರ ಕೆಲಸ ಕಾರ್ಯಗಳು ಕಚೇರಿಗಳಲ್ಲಿ ಆಗುವಂತಹ ಸಂದರ್ಭದಲ್ಲಿ ಅವರುಗಳಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು ಹಾಗೂ ಸರ್ವರೂ ಪರಸ್ಪರ ಸಹಬಾಳ್ವೆಯಿಂದ ಬದುಕು ನಡೆಸಬೇಕು ಎಂದರು.

ಇದಕ್ಕೂ ಮುನ್ನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರುಗಳ ಸಾಲಿಗ್ರಾಮ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು:

ಗೌರವಾಧ್ಯಕ್ಷರಾಗಿ ಶಿರಸ್ತೇದಾರ್ ಎಂ.ಸಿ.ಶಿವಕುಮಾರ್, ಅಧ್ಯಕ್ಷರಾಗಿ ಬಳ್ಳೂರು ಶಿವಮೂರ್ತಿ, ಉಪಾಧ್ಯಕ್ಷರಾಗಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಖಜಾಂಚಿಯಾಗಿ ಚನ್ನಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಕುಮಾರ್, ನಿರ್ದೇಶಕರುಗಳಾಗಿ ಯಶೋಧ, ಸಂತೋಷ್, ವಸಂತ್ ಕುಮಾರ್ ಅವರುಗಳು ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಎಂ.ಆರ್.ಹರೀಶ್, ಲೋಕೇಶ್, ಉಮೇಶ್, ಬಿಂದು, ಗಾಯಿತ್ರಿ, ಏ.ಎಸ್.ಹರೀಶ್, ಗೋವಿಂದಯ್ಯ, ಮಂಜುನಾಥ, ಸೋಮಯ್ಯ, ಶಾಂತೇಂದ್ರ, ಜಯಮ್ಮ, ಗೋಪಾಲಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular