ಹುಣಸೂರು : ಜಮೀನು ಕೆಲಸ ಮಾಡಲು ತೆರಳುತ್ತಿದ್ದ ಮಹಿಳೆಯನ್ನ ಐಸ್ ಮಾರಾಟ ಮಾಡುವ ನೆಪದಲ್ಲಿ ಹಿಂಬಾಲಿಸಿ ನಂತರ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಪರಾರಿಯಾದ ಖದೀಮ ಪೊಲೀಸರ ಅತಿಥಿಯಾದ ಘಟನೆ ಹುಣಸೂರಿನಲ್ಲಿ ನಡೆದಿದೆ.
ಕೆಂಪರಾಜು ಸಿಕ್ಕಿಬಿದ್ದ ಆರೋಪಿ. ಹುಣಸೂರು ತಾಲೂಕು ಹೊಸವಾರಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಜ್ಯೋತಿ ಎಂಬುವರು ಅವರೆಕಾಯಿ ಕೊಯ್ಯಲು ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಕೆಂಪರಾಜು ಐಸ್ ಕ್ರೀಂ ಮಾರಾಟ ಮಾಡುತ್ತಿರುವಂತೆ ಹಿಂಬಾಲಿಸಿದ್ದಾನೆ. ಜ್ಯೋತಿ ಅವರು ಜಮೀನಿಗೆ ಪ್ರವೇಶಿಸಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕೆಂಪರಾಜು ಕಲ್ಲನ್ನ ಎತ್ತಿ ತಲೆಮೇಲೆ ಹಾಕಿ ಕೊಲ್ಲುವ ಬೆದರಿಕೆ ಒಡ್ಡಿ ೩೫ ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ಕೂಡಲೇ ಕೆಂಪರಾಜು ನಿಂದ ಬಚಾವ್ ಆಗಿ ಬಂದ ಜ್ಯೋತಿ ಸನಿಹದಲ್ಲೇ ಕೆಲಸ ಮಾಡುತ್ತಿದ್ದ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೆಂಪರಾಜುನ ಪತ್ತೆ ಹಚ್ಚಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ. ಚಿನ್ನದ ಸರ ವಶಪಡಿಸಿಕೊಂಡ ಹುಣಸೂರು ಪೊಲೀಸರು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.