Friday, April 4, 2025
Google search engine

Homeರಾಜ್ಯಸುದ್ದಿಜಾಲಹನೂರಿನಲ್ಲಿ ಒಂಟಿ ಸಲಗ ಭೀತಿಯಲ್ಲಿ ಗ್ರಾಮಸ್ಥರು: ಸೂಕ್ತ ಕ್ರಮಕ್ಕೆ ಆಗ್ರಹ

ಹನೂರಿನಲ್ಲಿ ಒಂಟಿ ಸಲಗ ಭೀತಿಯಲ್ಲಿ ಗ್ರಾಮಸ್ಥರು: ಸೂಕ್ತ ಕ್ರಮಕ್ಕೆ ಆಗ್ರಹ

ಹನೂರು: ಕತ್ತಲು ಕವಿಯುತ್ತಲೇ ಕಾಡಾನೆಯೊಂದು ಗ್ರಾಮಕ್ಕೆ ಆಗಮಿಸಿ ಮರ-ಗಿಡಗಳನ್ನು ನಾಶ ಮಾಡುತ್ತಿರುವ ಘಟನೆ ತಾಲೂಕಿನ ಕಾಡಂಚಿನ ಪೊನ್ನಾಚಿ ಮತ್ತು ಮರೂರು ಗ್ರಾಮಗಳಲ್ಲಿ ನಡೆಯುತ್ತಿದೆ.

ಕತ್ತಲು ಕವಿಯುತ್ತಿದ್ದಂತೆ ಗ್ರಾಮಕ್ಕೆ ಒಂಟಿ ಸಲಗ ಆಗಮಿಸಿ ಮನೆಯ ಮುಂಭಾಗ ಹಾಕಲಾಗಿರುವ ತೆಂಗಿನಮರ, ಹಲಸಿನಮರ ಮತ್ತು ಮಾವಿನ ಮರಗಳಿಗೆ ಹಾನಿಯುಂಟು ಮಾಡುತ್ತದೆ. ಜತೆಗೆ ಗ್ರಾಮಕ್ಕೆ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ ಲೈನ್‌ ಗಳು, ಜಮೀನುಗಳಲ್ಲಿನ ನೀರಾವರಿ ಪರಿಕರಗಳನ್ನು ಹಾಳು ಮಾಡುತ್ತಿದೆ.

ಕಳೆದ 3 ತಿಂಗಳಿನಿಂದಲೂ ಈ ಒಂಟಿ ಸಲಗ ನಿರಂತರವಾಗಿ ಗ್ರಾಮದತ್ತ ಆಗಮಿಸುತ್ತಿದ್ದು ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು 6 ಗಂಟೆಯಾಗುತ್ತಲೇ ಮನೆಯ ಒಳಗಡೆ ಸೇರಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಕರ‍್ಯ ನಿಮಿತ್ತ ನಗರ ಪ್ರದೇಶಗಳಿಗೆ ತೆರಳಿ ಬರುವುದು ತಡವಾದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಗ್ರಾಮ ಸೇರಬೇಕಾದ ಪರಿಸ್ಥಿತಿಯಿದೆ. ಈ ಒಂಟಿ ಸಲಗದಿದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular