ಹೊಸೂರು : ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ನಿಷ್ಠೆಯಿಂದ ತಮ್ಮ ಕಾರ್ಯವನ್ನು ನಿರ್ವಹಿಸಿ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಆಗ ಅಧಿಕಾರಿಗಳು ಉತ್ತಮ ಹೆಸರು ಸಾಧ್ಯಗಳಿಸಲು ಎಂದು ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಸ್.ದಿಲೀಪ್ ಕುಮಾರ್ ತಿಳಿಸಿದರು. ಅವರು ಅರ್ಜುನಹಳ್ಳಿ ಗ್ರಾ.ಪಂ.ವತಿಯಿಂದ ಈ ಹಿಂದೆ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡ ಪಿಡಿಓ ಪೂರ್ಣಿಮಾ ಅವರನ್ನು ಅಭಿನಂದಿಸಿ ಮಾತನಾಡಿದರು.
ಪಿಡಿಓಗಳೆಲ್ಲಾ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗ್ರಾಮಗಳ ಅಭ್ಯುದಯ ಖಂಡಿತ ಸಾಧ್ಯ ಎಂದ ಅವರು
ಒಬ್ಬ ಅಧಿಕಾರಿ ಸಾರ್ವಜನಿಕರ ಜತೆಯಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದು ಮುಖ್ಯ ಅದರಂತೆ ಜನರು ಸಹ ಆ ಅಧಿಕಾರಿಗೆ ಗೌರವ ನೀಡುವುದರ ಜತೆಗೆ ಸಹಕಾರ ನೀಡುತ್ತಾರೆ ಎಂದರು.
ನಮ್ಮ ಗ್ರಾಪಂನಲ್ಲಿ ಆರು ವರ್ಷ ಪಿಡಿಓ ಆಗಿ ಕಾರ್ಯ ನಿರ್ವಹಿಸಿದ್ದ ಪೂರ್ಣಿಮಾ ಅವರು, ಗ್ರಾಮ ಪಂಚಾಯತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಉತ್ತಮ ಸೇವೆ ಮಾಡಿದ್ದರು. ಗ್ರಾಪಂ, ಸದಸ್ಯರು ಸೇರಿದಂತೆ ಎಲ್ಲರನ್ನೂ ಬಹಳ ವಿಶ್ವಾಸದಿಂದ ಕಾಣುತ್ತಿದ್ದರು. ಪೂರ್ಣಿಮಾ ಅವರು ಪಿಡಿಓ ಆಗಿ ಪಂಚಾಯ್ತಿಗೆ ನೇಮಕವಾದಾಗ ಗ್ರಾಮ ಪಂಚಾಯತಿಯ ಸ್ವಂತ ಕಟ್ಟಡ ಇರಲಿಲ್ಲ ಮೊದಲು ಗ್ರಾಮ ಪಂಚಾಯತಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶ್ರಮಿಸಿದ ಇವರ ಕಾರ್ಯವೈಖರಿ ನೋಡಿ ಸದಸ್ಯರೆಲ್ಲರೂ ಸಂತಸ ವ್ಯಕ್ತಪಡಿಸಿದರು.
ನಮ್ಮ ಮನೆಯ ಸದಸ್ಯರಂತೆ ಎಲ್ಲರ ಜತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಅಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಿದರು ಎಂದು ಅಧ್ಯಕ್ಷ ದಿಲೀಪ್ ತಿಳಿಸಿ, ನಮ್ಮ ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸಿದ ರೀತಿಯಲ್ಲಿಯೇ ಆ ಗ್ರಾಪಂಯಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು ತಮ್ಮ ಮನದಾಳದ ಮಾತುಗಳನ್ನು ನುಡಿದು ನಂತರ ಸದಸ್ಯರೊಡಗೂಡಿ ಶುಭ ಹಾರೈಸಿ, ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು
ಪಿಡಿಓಗಳಾದ ಸಂತೋಷ್, ಚಿದಾನಂದ್,ಪೂರ್ಣಿಮಾ ಉಪಾಧ್ಯಕ್ಷ ಕಾಳಮ್ಮ, ಸದಸ್ಯರಾದ ಮಹದೇವಪ್ಪ, ಬಸವರಾಜು, ಕೆ.ಎಂ.ಮಂಜು, ಸಿರಿ, , ರತ್ನಮ್ಮನಾಗೇಂದ್ರ, ಆಶಾದೇವು, ಚಂದ್ರಕಲಾ, ವಜ್ರಕುಮಾರ್, ಹೇಮಾವತಿ, ಕಾರ್ಯದರ್ಶಿ ದುಶಂತ್ ಕುಮಾರ್, ಸಿಬ್ಬಂದಿಗಳಾದ ಬಿ.ಎ.ರಾಘವೇಂದ್ರ, ದೀಪಿಕಾ, ಅಟೆಂಡರ್ ಯೋಗೇಶ್ ಮೊದಲಾದವರು ಇದ್ದರು.