ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪತ್ರಕರ್ತರು ಸಮಾಜದ ಮತ್ತು ಸರ್ಕಾರದ ಅಂಕು-ಡೊಂಕುಗಳನ್ನು ತಿದ್ದುವವರಾಗಿದ್ದು, ವೃತ್ತಿ ಬದ್ಧತೆ ಕಾಪಾಡಿಕೊಳ್ಳುವಂತೆ ಲಯನ್ಸ್ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಟಿ.ಪಿ.ನಂದೀಶ್ ಹೇಳಿದರು. ಹುಣಸೂರು ತಾಲ್ಲೂಕು ಪತ್ರಕರ್ತರ ಸಂಘ ಪತ್ರಕರ್ತ ದಿ. ಹೆಚ್.ಆರ್. ಶ್ರೀನಿವಾಸ್ ಅವರ ಸ್ಮರಣಾರ್ಥ ಹುಣಸೂರಿನ ಪ್ರಜಾವಾಣಿ ಪತ್ರಿಕೆ ವರದಿಗಾರ ಹೆಚ್.ಎಸ್.ಸಚ್ಚಿತ್ ಅವರು ಸ್ಥಾಪಿಸಿರುವ ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಾಮೀ ಣಾಭಿವೃದ್ಧಿ ವರದಿ ಪ್ರಶಸ್ತಿಗೆ ಭಾಜನರಾದ ಕೆ ಆರ್ ನಗರ ತಾಲೂಕಿನ ಪ್ರತಿನಿಧಿ ಪತ್ರಿಕೆಯ ವರದಿಗಾರರಾದ ವಿನಯ್ ದೊಡ್ಡಕೊಪ್ಪಲು ಅವರನ್ನು ಸಮಾನ ಮನಸ್ಕರ ವೇದಿಕೆ ವತಿಯಿಂದ ಅಭಿನಂದಿಸಿ ಮಾತನಾಡಿದರು.
ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ, ಪತ್ರಕರ್ತರು ದಿಟ್ಟತನದಿಂದ ಕಾರ್ಯ ನಿರ್ವಹಿಸ ಬೇಕಾದುದು ಅತ್ಯಗತ್ಯ. ಹಾಗಾಗಿ ಸಮರ್ಥರಿಗೆ ಮನ್ನಣೆ ನೀಡ ಬೇಕಾದುದು ಎಲ್ಲರ ಕರ್ತವ್ಯ ಎಂದರು.
ವೃತ್ತಿಪರವಾಗಿ ಪ್ರಭುದ್ದತೆ ಪತ್ರಕರ್ತರಿಗೆ ಇರಬೇಕು, ಪತ್ರಕರ್ತರಲ್ಲಿ ಸಾಮಾಜಿ ಕಳಕಳಿ ಇನ್ನಷ್ಟು ಹೆಚ್ಚಾಗ ಬೇಕಿದೆ, ಅದರಲ್ಲೂ ಗ್ರಾಮೀಣ ಪತ್ರಕರ್ತರು ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಆಲಿಸಿ ಬರೆಯುತ್ತಿದ್ದಾರೆ ಇದು ಶ್ಲಾಘನೀಯ ಕೆಲಸ ಎಂದರು.
ನೀವು ಮಾಡಿದ ಮಹತ್ವದ ಕೆಲಸವನ್ನು ಗುರುತಿಸುವ ಒಂದು ಕ್ಷಣ. ನಿಮ್ಮ ಬದ್ಧತೆ, ಪರಿಶ್ರಮ ಮತ್ತು ವೃತ್ತಿಪರತೆಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ನಿಮ್ಮ ಮುಂದಿನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ ನೀವು ಸಾಧಿಸಿದ ಯಶಸ್ಸಿಗೆ ನಾವು ಹೆಮ್ಮೆ ಪಡುತ್ತೇವೆ ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇವೆ ಎಂದು ನುಡಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಕೆ.ಎಲ್.ರಮೇಶ್, ಪಿಕಾರ್ಡ್ ಬ್ಯಾಂಕ್ ನಿರ್ಧೇಶಕ ಎಂ.ಎಸ್. ಹರಿಚಿಂದಬರ್, ತಾ.ಒಕ್ಕಲಿಗರ ಸಂಘದ ನಿರ್ಧೇಶಕರಾದ ದೇವೆಂದ್ರ, ರಾದಕೃಷ್ಣ, ಸಿ.ಆರ್.ಪಿ ಶಂಕರೇಗೌಡ ಜೆಡಿಎಸ್ ಮುಖಂಡ ಎಚ್.ಆರ್.ಮಧುಚಂದ್ರ, ವಕೀಲ ಡಿ.ಆರ್.ರಮೇಶ್, ಪೊಲೀಸ್ ಮಿತ್ರಕುಮಾರ್, ಹೆಚ್.ಕೆ.ಕೀರ್ತಿ, ಸಿದ್ದಾಪುರ ಸತೀಶ್, ಯಜಮಾನ್ ಮಾದೇಗೌಡರು, ಸಿದ್ದಾಪುರ ತ್ಯಾಗ, ಬಸವರಾಜು, ಶಿಕ್ಷಕರಾದ ಮಿರ್ಲೆ ಧನಂಜಯ್, ಕಾಂತರಾಜ್ ಇದ್ದರು