Friday, April 18, 2025
Google search engine

Homeಸಿನಿಮಾವಿನಯ್‌ ರಾಜ್‌ ಕುಮಾರ್‌ ನಟಿಸಿರುವ ʼಪೆಪೆʼ ಆಗಸ್ಟ್‌ 30ರಂದು ತೆರೆಗೆ

ವಿನಯ್‌ ರಾಜ್‌ ಕುಮಾರ್‌ ನಟಿಸಿರುವ ʼಪೆಪೆʼ ಆಗಸ್ಟ್‌ 30ರಂದು ತೆರೆಗೆ

ವಿನಯ್‌ ರಾಜ್‌ ಕುಮಾರ್‌ ನಟಿಸಿರುವ ಪೆಪೆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆಗಸ್ಟ್‌ 30ಕ್ಕೆ ತೆರೆಕಾಣುತ್ತಿದೆ. ಟೈಟಲ್‌ ಹಾಗೂ ಟೀಸರ್‌ ಮೂಲಕ ಗಮನ ಸೆಳೆದಿರುವ ಈ ಚಿತ್ರ ಈಗ ಸೆನ್ಸಾರ್‌ ಪಾಸಾಗಿದ್ದು, ಸೆನ್ಸಾರ್‌ನಿಂದ ಎ ಪ್ರಮಾಣ ಪತ್ರ ಪಡೆದಿದೆ.

ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್‌ ಹಾಕಿದ್ದಾರೆ.

ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್‌ ಡಿಸೈನ್‌ ಬೇರೆ ರೀತಿ ಇದೆ. ಕ್ಲಾಸ್‌ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್‌ ರಾಜ್‌ ಕುಮಾರ್‌ ಪೆಪೆಗಾಗಿ ಮಾಸ್‌ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್‌ ಎಸ್‌ ನಾಯರ್‌ ನಿರ್ದೇಶನದಲ್ಲಿ ವಿನಯ್‌ ರಗಡ್‌ ಲುಕ್‌ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಈ ರೀತಿಯ ಪಾತ್ರದಲ್ಲಿ ವಿನಯ್‌ ಕಾಣಿಸಿಕೊಂಡಿಲ್ಲ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ, ಯಶ್‌ ಶೆಟ್ಟಿ, ಬಲ ರಾಜವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ, ನವೀನ್‌ ಡಿ. ಪಡೀಲ್‌ ನಟಿಸಿದ್ದಾರೆ.

RELATED ARTICLES
- Advertisment -
Google search engine

Most Popular