ಗುಂಡ್ಲುಪೇಟೆ: ಹುಲಿಯೊಂದು ಕಾಡೆಮ್ಮೆ ಮಾಂಸವನ್ನು ಕಿತ್ತು ಎಳೆದೋಯ್ದ ಘಟನೆ ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮಾರ್ಗ ಮಧ್ಯೆದ ಕಾನನದಲ್ಲಿ ನಡೆದಿದೆ.
ಹುಲಿಯೊಂದು ಕಾಡೆಮ್ಮೆಯನ್ನು ಬೇಟಿಯಾಡಿ ನಂತರ ಅದರ ಮಾಂಸವನ್ನು ಕಚ್ಚಿ ಕಿತ್ತುಕೊಂಡು ತೆರಳುತ್ತಿರುವ ದೃಶ್ಯವನ್ನು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಬಸ್ ನಲ್ಲಿ ವಾಪಸ್ ಆಗುತ್ತಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ರೋಮಾಂಚನಗೊಂಡಿದ್ದಾರೆ. ಇದೀಗ ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನೂ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲಿ ಈ ಹುಲಿ ಆಗಿಂದ್ದಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರ ಕ್ಯಾಮರಾಗಳಿಗೂ ಸಹ ಫೋಸ್ ನೀಡುತ್ತಿದೆ. ಇದರಿಂದ ಜನರು ಇದನ್ನು ಬೆಟ್ಟದ ಹುಲಿ ಎಂತಲೇ ಕರೆಯುತ್ತಿದ್ದಾರೆ.