Friday, April 11, 2025
Google search engine

Homeಸಿನಿಮಾ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಿದ ವೀರೇಂದ್ರ ಹೆಗ್ಗಡೆ

‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಿದ ವೀರೇಂದ್ರ ಹೆಗ್ಗಡೆ

ಯಶ್​ ನಟನೆಯ ‘ರಾಜಾಹುಲಿ’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಚೆನ್ನಾಗಿ ಗೊತ್ತು. ಈಗ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾ ಸಿದ್ಧವಾಗುತ್ತಿದೆ. ಆದರೆ ಇದು ಯಶ್​ ಅಭಿನಯದ ಸಿನಿಮಾ ಅಲ್ಲ. ಈ ಚಿತ್ರದ ಕಥೆಯಲ್ಲಿ ಕಥಾನಾಯಕ ಯಶ್​ ಅವರ ಅಭಿಮಾನಿ ಆಗಿರುತ್ತಾನೆ. ಹೊನ್ನರಾಜ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಿಲೀಸ್​ಗೆ ಸಜ್ಜಾಗುತ್ತಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾ ತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

ನಿರ್ದೇಶಕ ಹೊನ್ನರಾಜ್ ಅವರಿಗೆ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಮೊದಲ ಸಿನಿಮಾ. ನಿರ್ದೇಶನ ಮಾಡುವುದು ಮಾತ್ರವಲ್ಲದೇ, ಈ ಸಿನಿಮಾದಲ್ಲಿ ಅವರು ಹೀರೋ ಆಗಿ ಕೂಡ ನಟಿಸಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣ ಕೂಡ ಅವರದ್ದೇ. ಈಗ ಈ ಸಿನಿಮಾದ ಹೊಸ ಪೋಸ್ಟರ್​ ಅನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲೇ ಅನಾವರಣ ಮಾಡಿರುವುದು ವಿಶೇಷ.

ಪೋಸ್ಟರ್​ ಬಿಡುಗಡೆ ವೇಳೆ ಚಿತ್ರತಂಡದವರಾದ ನಾಯಕ ಕಮ್​ ನಿರ್ದೇಶಕ ಹೊನ್ನರಾಜ್, ನಂದಿಹಳ್ಳಿ ಶಿವಣ್ಣ, ರಾಜೇಂದ್ರ, ಜಗದೀಶ್, ಸಹ-ನಿರ್ದೇಶಕ ಪ್ರಕಾಶ್ ವೆಂಕಟರಮಣ, ಮೋಹನ್, ಸ್ಟಿಲ್ ವೆಂಕಟೇಶ್, ಜಗನ್ನಾಥ್ ಮುಂತಾದವರು ಹಾಜರಿದ್ದರು. ಸಂಜಯ್ ಶ್ರೀನಿವಾಸ್ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಶಿವಪುತ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಿರೀಶ್ ಅವರು ನೃತ್ಯ ನಿರ್ದೇಶನ‌ದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಮೈಸೂರು ಮಂಜುಳಾ, ರೇಖಾ ದಾಸ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀರೋಯಿನ್ ಶ್ರುತಿ ಬಬಿತಾ ಅವರಿಗೆ ಬಜಾರಿ ಹುಡುಗಿಯ ಪಾತ್ರವಿದೆ.

ಚಿತ್ರತಂಡದವರು ನೀಡಿರುವ ಮಾಹಿತಿ ಪ್ರಕಾರ, ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಾಣ ಆಗಿರುವ ಸಿನಿಮಾ. ಇದರಲ್ಲಿ ಫ್ಯಾಮಿಲಿ ಎಂಟರ್​ಟೇನ್ಮೆಂಟ್​ ಇರಲಿದೆ. ಯಶ್ ಅಭಿಮಾನಿಯಾಗಿ ಕಾಣಿಸಿಕೊಳ್ಳುವ ನಾಯಕನು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾನೆ.‌ ಯಾವಾಗಲೂ ಸಮಾಜಸೇವೆಯಲ್ಲಿ ಇರುತ್ತಾನೆ. ಅಂಥವನಿಗೆ ಕಂಕಣ ಭಾಗ್ಯ ಕೂಡಿಬರುತ್ತೋ ಇಲ್ಲವೋ ಎಂಬುದು ಸಿನಿಮಾ ಕಹಾನಿ.

RELATED ARTICLES
- Advertisment -
Google search engine

Most Popular